ಮುಟ್ಟಿನ ನೋವಿದ್ರೆ ಸಿಹಿಗೆಣಸು ತಿನ್ನಿ, ಇದರ ಪ್ರಯೋಜನಗಳು ಹೀಗಿವೆ
By Reshma Jan 14, 2025
Hindustan Times Kannada
ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ಬಹುತೇಕರು ನೋವು ಅನುಭವಿಸುತ್ತಾರೆ. ಇದು ಸಹಜ ಪ್ರಕ್ರಿಯೆಯಾದರೂ ಈ ನೋವು ಕೆಲವೊಮ್ಮೆ ಅಸಹನೀಯವಾಗಿರುತ್ತದೆ
ಮುಟ್ಟಿನ ನೋವಿಗೆ ಸಿಹಿಗೆಣಸು ಪರಿಹಾರವಾಗಲ್ಲದು. ಇದರಲ್ಲಿನ ಪೋಷಕಾಂಶಗಳು ಮುಟ್ಟಿನ ನೋವು ನಿವಾರಿಸುತ್ತದೆ. ಇದರೊಂದಿಗೆ ಮುಟ್ಟಿನ ಸಮಯದಲ್ಲಿ ಸಿಹಿಗೆಣಸು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ
ಸಿಹಿಗೆಣಸು ನಾರಿನಾಂಶ, ಜೀವಸತ್ವ, ಖನಿಜಗಳನ್ನು ಹೊಂದಿರುತ್ತದೆ, ಇದು ಋತುಚಕ್ರದ ಸಮಯದಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಿದೆ
ವಿಟಮಿನ್ ಇ, ಮೆಗ್ನಿಶಿಯಂ ಸಮೃದ್ಧವಾಗಿರುವ ಗೆಣಸು ಮುಟ್ಟಿನ ನೋವಿನಿಂದ ಪರಿಹಾರ ನೀಡುತ್ತದೆ
ಸಿಹಿಗೆಣಸು ನಾರಿನಾಂಶದಿಂದ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಿಂದ ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ
ಇದರಲ್ಲಿ ಉರಿಯೂತದ ಗುಣಲಕ್ಷಣಗಳು ಋತುಚಕ್ರದ ಸಮಯದಲ್ಲಿ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಇದರಲ್ಲಿ ಕಬ್ಬಿಣಾಂಶ ಮತ್ತು ಮೆಗ್ನಿಶಿಯಂ ಸಮೃದ್ಧವಾಗಿರುತ್ತದೆ. ಇದು ರಕ್ತಹೀನತೆಯನ್ನು ಸರಿದೂಗಿಸುತ್ತದೆ ಹಾಗೂ ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ
ಗೆಣಸಿನಲ್ಲಿರುವ ಬೀಟಾ ಕ್ಯಾರೊಟಿನ್ ಅಂಶವು ಹಾರ್ಮೋನ್ ಅಸಮತೋಲನಕ್ಕೆ ಸಹಾಯ ಮಾಡುತ್ತದೆ
ಸಿಹಿಗೆಣಸನ್ನು ನಿಯಮಿತವಾಗಿ ತಿನ್ನುವುದರಿಂದ ಋತುಚಕ್ರದ ಸಮಸ್ಯೆಗಳನ್ನು ನಿವಾರಿಸಬಹುದು
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದ ಬರಹ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ