ತೊಗರಿಬೇಳೆಯಲ್ಲಿ ಪ್ರೊಟೀನ್ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶವೂ ಹೇರಳವಾಗಿದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ
ಆದರೂ ಕೆಲವರಿಗೆ ನಿರಂತರವಾಗಿ ತೊಗರಿಬೇಳೆ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ಇದನ್ನು ಸೇವಿಸುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು
ಹಾಗಾದರೆ ಯಾವೆಲ್ಲಾ ಸಮಸ್ಯೆ ಇರುವವರು ತೊಗರಿಬೇಳೆ ಸೇವಿಸಬಾರದು ನೋಡಿ
ಆಸಿಡಿಟಿ, ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆ ಇರುವವರು ತೊಗರಿಬೇಳೆ ಸೇವಿಸದೇ ಇರುವುದು ಉತ್ತಮ. ಇದು ಜೀರ್ಣವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸಬಹುದು
ತೊಗರಿಬೇಳೆಯಲ್ಲಿ ಪೊಟ್ಯಾಶಿಯಂ ಹೇರಳವಾಗಿರುತ್ತದೆ. ಇದರಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಬಹುದು. ಕಿಡ್ನಿ ಸಮಸ್ಯೆ ಇರುವವರು ತಪ್ಪಿಯೂ ತೊಗರಿಬೇಳೆ ತಿನ್ನಬಾರದು. ಇದರಿಂದ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆಯೂ ಇದೆ
ತೊಗಿರಬೇಳೆಯು ಸಾಕಷ್ಟು ಪ್ರೊಟೀನ್ ಅಂಶವನ್ನು ಹೊಂದಿರುತ್ತದೆ. ಪ್ರೊಟೀನ್ ಜೀರ್ಣವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಇರುವವರಿಗೆ ಇನ್ನಷ್ಟು ತೊಂದರೆ ಎದುರಾಗುತ್ತದೆ. ಫೈಲ್ಸ್ ಸಮಸ್ಯೆ ಇರುವವರು ತೊಗರಿಬೇಳೆ ತಿನ್ನದೇ ಇರುವುದು ಉತ್ತಮ
ಅಲರ್ಜಿ ಮತ್ತು ಚರ್ಮ ಸಂಬಂಧಿ ಸಮಸ್ಯೆ ಇರುವವರು ತೊಗರಿಬೇಳೆ ತಿನ್ನುವುದನ್ನು ತಪ್ಪಿಸಬೇಕು
ತೊಗರಿಬೇಳೆ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚುತ್ತದೆ. ನೀವು ಈಗಾಗಲೇ ಯೂರಿಕ್ ಆಸಿಡ್ ಸಮಸ್ಯೆ ಹೊಂದಿದ್ದರೆ ಇದನ್ನು ತಿನ್ನಬೇಡಿ
ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಿ ತೊಂದರೆ ಉಂಟಾಗಲಿದ್ದರೆ ತೊಗರಿಬೇಳೆ ಸೇವಿಸುವುದನ್ನು ಕಡಿಮೆ ಮಾಡಬೇಕು
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂರ್ಪಕಿಸಿ
ಮದುವೆಯಾದ 3 ವರ್ಷಕ್ಕೇ ದಾಂಪತ್ಯ ನೀರಸ ಅನ್ನಿಸ್ತಿದ್ರೆ ಈ ಟಿಪ್ಸ್ ಮಿಸ್ ಮಾಡದೆ ಫಾಲೊ ಮಾಡಿ