ಅತಿಯಾಗಿ ಇಯರ್‌ಬಡ್ ಬಳಕೆ ಮಾಡ್ತೀರಾ, ಈ ಸಮಸ್ಯೆಗಳು ಕಾಡಬಹುದು ಎಚ್ಚರ
By Reshma
Oct 05, 2024
Hindustan Times
Kannada
ಫೋನ್‌ನಲ್ಲಿ ಮಾತನಾಡುವಾಗ, ಹಾಡು ಕೇಳುವಾಗ ಇಯರ್‌ಬಡ್ ಅಥವಾ ಏರ್‌ಪಾಡ್‌ಗಳನ್ನ ಬಳಸುತ್ತೇವೆ. ಕೆಲವರು ಗಂಟೆಗಟ್ಟಲೆ ಇದನ್ನ ಹಾಕಿಕೊಂಡೇ ಇರುತ್ತಾರೆ
ಇಯರ್‌ಬಡ್ ಅನ್ನ ಅತಿಯಾಗಿ ಬಳಸಿದ್ರೆ ತೊಂದರೆ ತಪ್ಪಿದ್ದಲ್ಲ. ಇದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದನ್ನು ನೋಡಿ
ಅತಿಯಾಗಿ ಇಯರ್‌ಬಡ್ ಬಳಸುವುದು ತಲೆನೋವಿನ ಸಮಸ್ಯೆ ಎದುರಾಗಲು ಕಾರಣವಾಗಬಹುದು
ಪದೇ ಪದೇ ಇಯರ್‌ಬಡ್ ಬಳಸುವುದರಿಂದ ನಿದ್ರಾಹೀನತೆ, ನಿದ್ದೆಯಲ್ಲಿ ಉಸಿರುಗಟ್ಟುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಇದರಿಂದ ನಿದ್ದೆಯ ಕೊರತೆ ಉಂಟಾಗುತ್ತದೆ
ಇಯರ್‌ಬಡ್‌ಗಳ ನಿರಂತರ ಬಳಕೆಯು ಶ್ರವಣ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಕೂಡ ಇದನ್ನು ಒಪ್ಪಿಕೊಂಡಿದೆ
ಇಯರ್‌ಬಡ್‌ಗಳ ನಿರಂರ ಬಳಕೆಯು ಕಿವಿಯಲ್ಲಿ ಗುಗ್ಗೆ ಸಂಗ್ರಹವಾಗಲು ಕಾರಣವಾಗುತ್ತದೆ. ಇದರಿಂದ ಕಿವಿಯ ಸೋಂಕು ಉಂಟಾಗಬಹುದು
ಕೆಲವರು ತಮ್ಮ ಇಯರ್‌ಬಡ್ ಅನ್ನು ಬೇರೆಯವರ ಜೊತೆ ಹಂಚಿಕೊಳ್ಳುತ್ತಾರೆ. ಇದು ಕಿವಿಯ ಅಲರ್ಜಿಗೆ ಕಾರಣವಾಗುತ್ತದೆ
ಇಯರ್‌ಬಡ್‌ಗಳ ಅತಿಯಾದ ಬಳಕೆಯು ಒತ್ತಡ ಮತ್ತು ಉದ್ವೇಗಕ್ಕೆ ಕಾರಣವಾಗುತ್ತದೆ
ತಜ್ಞರ ಪ್ರಕಾರ ಗಂಟೆಗಟ್ಟಲೆ ಇಯರ್‌ಬಡ್‌ಗಳ ಮೂಲಕ ಹಾಡು ಕೇಳುವುದು ಹೃದಯ ಬಡಿತ ಹೆಚ್ಚಾಗಲು ಕಾರಣವಾಗುತ್ತದೆ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ