ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ರಾತ್ರಿ ವೇಳೆ ಈ ಪಾನೀಯಗಳನ್ನು ಕುಡಿಯಿರಿ

By Priyanka Gowda
Jan 08, 2025

Hindustan Times
Kannada

ಬಿಸಿ ನೀರಿಗೆ ನಿಂಬೆ ರಸವನ್ನು ಹಿಂಡಿ ಕುಡಿಯಿರಿ. ರಾತ್ರಿ ವೇಳೆ ಇದನ್ನು ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಒಂದು ಲೋಟ ನೀರಿಗೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಹಾಕಿ ಕುಡಿಯಿರಿ. ಇದು ಕೂಡ ಹೊಟ್ಟೆ ನೋವಿಗೆ ಪ್ರಯೋಜನಕಾರಿ.

freepik

ಬಾದಾಮಿ ಹಾಲು ಕುಡಿದು ಬಾಳೆಹಣ್ಣು ತಿಂದರೆ ಹೊಟ್ಟೆಯಲ್ಲಿನ ಅಸಿಡಿಟಿ ಕಡಿಮೆಯಾಗುತ್ತದೆ.

ಬೆಚ್ಚಗಿನ ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ವಾಯುವಿನ ಸಮಸ್ಯೆ ದೂರವಾಗುತ್ತದೆ.

ನಿರ್ಜಲೀಕರಣ ಸಮಸ್ಯೆ ಹೊಂದಿದ್ದರೆ, ಎಳನೀರು ಅಥವಾ ಸಾಕಷ್ಟು ನೀರು ಕುಡಿಯಬೇಕು.

ರಾತ್ರಿ ಊಟದ ನಂತರ ಶುಂಠಿ ಚಹಾವನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆ ನಿವಾರಣೆಯಾಗುತ್ತದೆ.

ಜೇನುತುಪ್ಪವನ್ನು ಬಿಸಿನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಅಜೀರ್ಣ ತೊಂದರೆ ನಿವಾರಣೆಯಾಗುತ್ತದೆ.

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

freepik

ಹೀಗಿರುತ್ತೆ ನಾಗಾ ಸಾಧುಗಳ ವೇಷಭೂಷಣ

Pic Credit: Shutterstock