ದಿನಕ್ಕೊಂದು ಕ್ಯಾರೆಟ್ ತಿನ್ನಿ, ಈ ಆರೋಗ್ಯ ಪ್ರಯೋಜನ ಪಡೆದುಕೊಳ್ಳಿ

By Priyanka Gowda
Jan 07, 2025

Hindustan Times
Kannada

ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕ್ಯಾರೆಟ್ ಎಲ್ಲಾ ತರಕಾರಿಗಳಿಂತ ಹೆಚ್ಚು ವಿಟಮಿನ್ ಎ ಅನ್ನು ಹೊಂದಿರುತ್ತದೆ.

ದಿನಕ್ಕೆ ಒಂದು ದೊಡ್ಡ ಕ್ಯಾರೆಟ್ ಅಥವಾ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ.

ನಿಯತವಾಗಿ ಕ್ಯಾರೆಟ್ ತಿನ್ನುವವರಿಗೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ.

ಹೆಚ್ಚು ಕ್ಯಾರೆಟ್ ತಿನ್ನುವವರಲ್ಲಿ ಮೂತ್ರಕೋಶದ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಅನ್ನನಾಳದ ಕ್ಯಾನ್ಸರ್ ಬರುವ ಸಾಧ್ಯತೆಗಳು ಶೇಕಡಾ 50 ರಷ್ಟು ಕಡಿಮೆ.

ದಿನಕ್ಕೆ 200 ಗ್ರಾಂ ಹಸಿ ಕ್ಯಾರೆಟ್ ಅನ್ನು 3 ವಾರಗಳವರೆಗೆ ಸೇವಿಸಿದರೆ, ರಕ್ತದಲ್ಲಿನ ಕೊಲೆಸ್ಟ್ರಾಲ್ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎಂದು ಸಂಶೋಧನೆ ತೋರಿಸುತ್ತದೆ.

ಕ್ಯಾರೆಟ್ ತಿನ್ನುವವರಲ್ಲಿ ಲಿಸ್ಟೇರಿಯಾ ಎಂಬ ಸೂಕ್ಷ್ಮಜೀವಿಯಿಂದ ಉಂಟಾಗುವ ಅಪಾಯ ಕಡಿಮೆಯಾಗುತ್ತದೆ 

ಪ್ರತಿ 100 ಗ್ರಾಂ ಕ್ಯಾರೆಟ್‌ನಲ್ಲಿ ತೇವಾಂಶ, ಪ್ರೋಟೀನ್‍ಗಳು, ಕೊಬ್ಬು, ಖನಿಜ ಲವಣಗಳು, ಫೈಬರ್, ಕಾರ್ಬೋಹೈಡ್ರೇಟ್‍ ಅಂಶಗಳಿರುತ್ತವೆ.

ಕ್ಯಾರೆಟ್‌ನಲ್ಲಿ ಮೆಗ್ನೀಸಿಯಮ್, ಸೋಡಿಯಂ, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್, ಸತು, ಕ್ರೋಮಿಯಂ, ಸೆಲೆನಿಯಮ್ ಇರುತ್ತದೆ.

ಕ್ಯಾರೆಟ್‌ನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಥಯಾಮಿನ್, ನಿಯಾಸಿನ್ ಮತ್ತು ವಿಟಮಿನ್ ಸಿ ಇದೆ.

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

ತಂದೆಗೆ ದುಬಾರಿ ಬೈಕ್ ಗಿಫ್ಟ್‌ ಕೊಟ್ಟ ರಿಂಕು ಸಿಂಗ್