ಅತಿಯಾಗಿ ನಿದ್ರೆ ಮಾಡಿದ್ರೆ ಆಗುವ ಆರೋಗ್ಯ ಸಮಸ್ಯೆಗಳಿವು

By Raghavendra M Y
Jan 05, 2025

Hindustan Times
Kannada

ದಿನದಲ್ಲಿ 9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಿದರೆ ದೀರ್ಘಾವಧಿಯಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು

ಅತಿಯಾಗಿ ನಿದ್ರೆ ಮಾಡುವುದರಿಂದ ಆಗುವ ಆರೋಗ್ಯ ಸಮಸ್ಯೆಗಳು ಯಾವುವು ಎಂಬುದನ್ನು ತಿಳಿಯೋಣ

ಮಧುಮೇಹ: ಅತಿಯಾದ ನಿದ್ದೆಯು ದೇಹದ ನೈಸರ್ಗಿಕ ಸಿರ್ಕಾಡಿಯನ್ ಕಾರ್ಯಕ್ಕೆ ಅಡ್ಡಿಪಡಿಸುವ ಮೂಲಕ ಟೈಪ್ 2 ಮಧುಮೇಹದ ಅಪಾಯ ಹೆಚ್ಚಿಸುತ್ತೆ

ಇದು ಇನ್ಸುಲಿನ್ ಸಂವೇದನೆ, ಗ್ಲೂಕೋಸ್ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ

ಸ್ಥೂಲಕಾಯ: ಹೆಚ್ಚು ನಿದ್ರೆ ತೂಕ ಹೆಚ್ಚಳಕ್ಕೆ ಕಾರಣವಾಗಬಹದು. ಹಸಿವು, ಹಾರ್ಮೋನ್ ನಿಯಂತ್ರಣಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುತ್ತೆ, ಅತಿಯಾಗಿ ತಿನ್ನುವುದನ್ನು ಉತ್ತೇಜಿಸುತ್ತೆ

ಡಾರ್ಕ್ ಸರ್ಕಲ್ಸ್: ಹೆಚ್ಚು ಸಮಯ ನಿದ್ರೆ ಮಾಡಿದರೆ ನಿಮ್ಮ ಮುಖದ ಸುತ್ತಲೂ ಮತ್ತು ಕಣ್ಣುಗಳ ಕೆಳಗೆ ಕಪ್ಪು ವರ್ತುಲ ನಿರ್ಮಾಣವಾಗುತ್ತೆ

ನಿಮ್ಮ ಕಣ್ಣುಗಳು ಉಬ್ಬುವಂತೆ ಮಾಡುತ್ತದೆ. ಕಣ್ಣು ಬಿಡಲು ಕಷ್ಟವಾಗಬಹುದು

ತ್ವಚೆ ಸಮಸ್ಯೆ: ಅತಿಯಾದ ನಿದ್ದೆ ನಿಮ್ಮ ತ್ವಚೆ ತೆಳುವಾಗಿ ಕಾಣುವಂತೆ ಮಾಡುತ್ತದೆ

ನೋವು, ಅಸ್ವಸ್ಥತೆ: ಹೆಚ್ಚು ಹೊತ್ತು ನಿದ್ರಿಸುವದು ಬೆನ್ನು ನೋವು, ಕುತ್ತಿಗೆ ಬಿಗಿತ, ತಲೆನೋವು ಮುಂತಾದ ದೈಹಿಕ ಅಸ್ವತ್ಥತೆಗೆ ಕಾರಣವಾಗಬಹುದು

ಅತಿಯಾದ ನಿದ್ದೆ ಸ್ನಾಯುಗಳು ಮತ್ತು ಕೀಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಇದು ನೋವಿಗೆ ಕಾರಣವಾಗುತ್ತದೆ

ಹೃದಯ ಸಮಸ್ಯೆ: ಅತಿಯಾಗಿ ನಿದ್ದೆ ಮಾಡುವುದರಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ಹೃದಯಾಘಾತ ಅಪಾಯವನ್ನು ಹೆಚ್ಚಿಸಬಹುದು

 ರಕ್ತದೊತ್ತಡದ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ. ಉರಿಯೂತವನ್ನು ಹೆಚ್ಚಿಸುತ್ತದೆ. ಹೃದಯ ರಕ್ತನಾಳದ ವ್ಯವಸ್ಥೆಯ ಮೇಲೆ ಅನಗತ್ಯ ಒತ್ತಡ ಉಂಟುಮಾಡುತ್ತೆ

ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ