ಈ ಸಮಸ್ಯೆ ಇರುವವರು ಬಿಸಿನೀರಿನಲ್ಲಿ ಜೇನುತುಪ್ಪ– ನಿಂಬೆರಸ ಬೆರೆಸಿ ಕುಡಿಯಬಾರದು

By Reshma
Nov 09, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಹಲವರು ಬೆಳಗೆದ್ದು ಬಿಸಿನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿ ಕುಡಿಯುತ್ತಾರೆ. ಇದು ದೇಹವನ್ನು ಡಿಟಾಕ್ಸ್ ಮಾಡಿ, ತೂಕ ಇಳಿಕೆಗೂ ನೆರವಾಗುತ್ತದೆ 

ಈ ಪಾನಿಯವು ಸಾಕಷ್ಟು ವಿಟಮಿನ್ ಸಿ, ನಾರಿನಾಂಶ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ 

ಇದರಿಂದ ಇಷ್ಟೆಲ್ಲಾ ಪ್ರಯೋಜನವಿದ್ದರೂ ಕೆಲವರಿಗೆ ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ 

ಬಾಯಿಹುಣ್ಣಿನ ಸಮಸ್ಯೆ ಇದ್ದವರು ಬಿಸಿನೀರಿಗೆ ಜೇನುತುಪ್ಪ, ನಿಂಬೆರಸ ಬೆರೆಸಿ ಕುಡಿಯಬಾರದು. ಇದು ಸುಡುವ ಸಂವೇದನೆಯನ್ನು ಹೆಚ್ಚಿಸುತ್ತದೆ 

ಆ್ಯಸಿಡ್ ರಿಫ್ಲಕ್ಸ್ ಅಥವಾ ಹೈಪರ್ ಆ್ಯಸಿಡಿಟಿ ಸಮಸ್ಯೆಯಿಂದ ಬಳಲುವವರು ಕೂಡ ಈ ನೀರು ಕುಡಿಯವುದನ್ನು ತಪ್ಪಿಸಬೇಕು 

ಮಧುಮೇಹ ಇರುವವರು ಜೇನುತುಪ್ಪ ಹೆಚ್ಚು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆಯಾಗಬಹುದು, ಹಾಗಾಗಿ ಅವರಿಗೂ ಇದು ಒಳ್ಳೆಯದಲ್ಲ

ಮೂಳೆಗಳು ದುರ್ಬಲವಾಗಿರುವ ಹಾಗೂ ಹಲ್ಲುಗಳು ಸಡಿಲವಾಗಿರುವ ಜನರು ನಿಂಬೆ ಹಾಗೂ ಜೇನುತುಪ್ಪ ಬೆರೆಸಿ ಕುಡಿಯುವುದನ್ನು ತಪ್ಪಿಸಬೇಕು 

ಕೆಲವರಿಗೆ ನಿಂಬೆ, ಜೇನು ಅಲರ್ಜಿಯಾಗಬಹುದು. ಗರ್ಭಿಣಿಯರು ಕೂಡ ವೈದ್ಯರ ಸಲಹೆ ಪಡೆದು ಇದನ್ನು ಸೇವಿಸಬೇಕು 

ನಿಂಬೆರಸ, ಜೇನುತುಪ್ಪ ಎರಡನ್ನೂ ಮಿತವಾಗಿ ಬೆರೆಸಿ ಕುಡಿಯಿರಿ. ಅತಿಯಾದರೆ ಆರೋಗ್ಯಕ್ಕೆ ಹಾನಿಯಾಗಬಹುದು ಎಚ್ಚರ 

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ 

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna