ಇತ್ತೀಚಿನ ದಿನಗಳಲ್ಲಿ ಥೈರಾಯಿಡ್ ಸಮಸ್ಯೆ ಸಾಮಾನ್ಯವಾಗಿದೆ. ಕೆಲವೊಮ್ಮೆ ಇದನ್ನ ಗುರುತಿಸುವುದು ಕಷ್ಟವಾಗುತ್ತದೆ. ಹೈಪೊಥೈರಾಯಿಡಿಸಮ್ ಹಾಗೂ ಹೈಪರ್ ಥೈರಾಯಿಡಿಸಮ್ ನಿಯಂತ್ರಿಸಲು ಯೋಗಾಸನಗಳು ನೆರವಾಗುತ್ತವೆ
ಇಂತಹ ಯೋಗಾಸನಗಳು ಥೈರಾಯಿಡ್ ನಿಯಂತ್ರಿಸುವುದು ಮಾತ್ರವಲ್ಲ, ನಮ್ಮ ಒಟ್ಟಾರೆ ದೈಹಿಕ ಕಾರ್ಯ ಸುಧಾರಣೆಗೂ ನೆರವಾಗುತ್ತವೆ. ಇಂತಹ ಕೆಲವು ಯೋಗಾಸನಗಳು ಇಲ್ಲಿವೆ ನೋಡಿ
ಸರ್ವಾಂಗಸನ: ಈ ಆಸನವು ಥೈರಾಯಿಡ್‌ಗೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಹೈಪೋಥೈರಾಯ್ಡಿಸಮ್‌ಗೆ ಪರಿಹಾರ ನೀಡುತ್ತದೆ. ಒಟ್ಟಾರೆ ಥೈರಾಯ್ಡ್ ಆರೋಗ್ಯಕ್ಕೆ ಈ ಆಸನ ಉತ್ತಮ
ವಿಪರೀತ ಕರಣಿ: ಈ ಭಂಗಿಯು ದೇಹವನ್ನು ಶಾಂತಗೊಳಿಸುತ್ತದೆ. ನಿದ್ರೆಯನ್ನು ಸುಗಮಗೊಳಿಸುತ್ತದೆ. ಮಿಲೋಮ ಮೂಲಕ ಹೈಪೋಥೈರಾಯ್ಡಿಸಮ್ ನಿರ್ವಹಣೆಯನ್ನು ಬೆಂಬಲಿಸುತ್ತದೆ
ಸೇತು ಬಂದಾಸನ: ಥೈರಾಯಿಡ್‌ಗೆ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಅದು ಗರ್ಭಾವಸ್ಥೆಯನ್ನೂ ಸುಗಮಗೊಳಿಸುತ್ತದೆ
ಹಲಾಸನ: ಥೈರಾಯ್ಡ್ ಕಾರ್ಯವನ್ನು ಉತ್ತೇಜಿಸುತ್ತದೆ ಮತ್ತು ಬೆನ್ನನ್ನು ಬಲಪಡಿಸುತ್ತದೆ. ಹೈಪೋಥೈರಾಯ್ಡಿಸಮ್‌ಗೆ ಈ ಆಸನ ಸಹಕಾರಿ. ಆದರೆ ಹೈಪರ್ ಥೈರಾಯ್ಡ್ ಆಗಿದ್ದರೆ ಈ ಆಸನ ಮಾಡದೇ ಇರುವುದು ಉತ್ತಮ
ಶವಾಸನ: ರಕ್ತಪರಿಚಲನೆ ಹೆಚ್ಚಿಸುವ ಮೂಲಕ ಮತ್ತು ಹೈಪೋ ಥೈರಾಯ್ಡಿಸಮ್ ಪರಿಹಾರಕ್ಕೆ ಸಹಾಯ ಮಾಡುವ ಮೂಲಕ ಥೈರಾಯ್ಡ್ ಆರೋಗ್ಯವನ್ನು ಸುಧಾರಿಸುವ ಭಂಗಿಯಿದು
ನಿಮ್ಮ ಮನೆ ದೊಡ್ಡದಾಗಿ ಕಾಣಿಸಬೇಕೆ? ಈ ಸಿಂಪಲ್ ಟಿಪ್ಸ್ ಫಾಲೊ ಮಾಡಿ