ಪ್ರತಿದಿನ 1 ಗಂಟೆ ವಾಕ್‌ ಮಾಡುವುದರಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳಿವು 

Pexels

By Reshma
Apr 15, 2024

Hindustan Times
Kannada

ಪ್ರತಿನಿತ್ಯ ವಾಕ್‌ ಮಾಡುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ವಾಕಿಂಗ್‌ ದೇಹದ ಹಲವು ರೋಗಗಳನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲ ಇದು ಮಾನಸಿಕ ಆರೋಗ್ಯಕ್ಕೂ ಉತ್ತಮ.  

Pexels

ಪ್ರತಿದಿನ 1 ಗಂಟೆ ಕಾಲ ವಾಕಿಂಗ್‌ ಮಾಡುವುದರಿಂದ ದೇಹಕ್ಕೆ ಹಲವು ಅದ್ಭುತ ಪ್ರಯೋಜನಗಳು ಸಿಗುತ್ತವೆ. ಅಂತಹ ಪ್ರಯೋಜನಗಳೇನು ಎಂದು ತಿಳಿದರೆ ನೀವು ಇಂದಿನಿಂದಲೇ ವಾಕಿಂಗ್‌ ಶುರು ಮಾಡುತ್ತೀರಿ. 

ಹೃದಯಕ್ಕೆ ಒಳ್ಳೆಯದು - ವಾಕಿಂಕ್‌ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹೃದ್ರೋಗಗಳಿಂದ ದೂರಾಗಲು ಪ್ರತಿದಿನ ಕನಿಷ್ಠ ಅರ್ಧ ಗಂಟೆಯವರೆಗೆ ಚುರುಕಾಗಿ ನಡೆಯಬೇಕು.

Pexels

ಪ್ರತಿದಿನ 1 ಗಂಟೆಯ ವಾಕ್‌ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

Pexels

ದೇಶದಲ್ಲಿ ಇಂದು ಮೂರರಲ್ಲಿ ಒಬ್ಬರು ಬಿಪಿ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿನಿತ್ಯ ಒಂದು ಗಂಟೆಗಳ ಕಾಲ ವಾಕ್‌ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಈ ಸಮಸ್ಯೆಯಿಂದ ಹೊರಗುಳಿಯಬಹುದು.  ನಿದ್ರೆಗೆ ಉತ್ತಮ - ವಾಕಿಂಗ್ ನಿದ್ರೆಯನ್ನು ಸುಧಾರಿಸುತ್ತದೆ. ಉತ್ತಮ ಮತ್ತು ನಿಶ್ಚಂತ ನಿದ್ದೆಗೆ ವಾಕಿಂಗ್‌ ಸಹಕಾರಿ. 

Pexels

ಪ್ರತಿದಿನ ತಪ್ಪದೇ ಗಂಟೆಗಳ ಕಾಲ ವಾಕಿಂಗ್ ಮಾಡುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ. ಅತಿಯಾದ ತೂಕವು ಹಲವು ಗಂಭೀರ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ.

Pexels

ದೇಹದಲ್ಲಿ ಚೈತನ್ಯವನ್ನು ಹೆಚ್ಚಿಸುತ್ತದೆ: ಬೆಳಿಗ್ಗೆ ಬೇಗನೆ ಎದ್ದು ವಾಕ್‌ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಿ, ಚೈತನ್ಯ ಮೂಡುತ್ತದೆ. ದಿನವಿಡೀ ನೀವು ಆಕ್ಟಿವ್‌ ಆಗಿರುವಂತೆ ಮಾಡುತ್ತದೆ. 

Pexels

ಧನಾತ್ಮಕ ಮನೋಭಾವ - ಬೆಳಗಿನ ವಾಕ್‌ ನಿಮ್ಮ ಮನಸ್ಥಿತಿಯನ್ನು ರಿಫ್ರೆಶ್ ಮಾಡುತ್ತದೆ ಮತ್ತು ಧನಾತ್ಮಕ ಭಾವ ಮೂಡುವ ಜೊತೆಗೆ ಆತ್ಮವಿಶ್ವಾಸವನ್ನೂ  ಹೆಚ್ಚಿಸುತ್ತದೆ.

Pexels

ಪ್ಲೇಆಫ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ