ಬೊಜ್ಜು ಕರಗಿ, ವೇಗವಾಗಿ ತೂಕ ಇಳಿಯಲು ಈ ಆಯುರ್ವೇದ ಸಲಹೆ ಪಾಲಿಸಿ
By Reshma Jul 05, 2024
Hindustan Times Kannada
ಇತ್ತೀಚಿನ ದಿನಗಳಲ್ಲಿ ಹಲವರು ಬೊಜ್ಜು, ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳುವುದು ಹಲವರಿಗೆ ಸವಾಲಾಗಿ ಪರಿಣಮಿಸಿರುವುದು ಸುಳ್ಳಲ್ಲ. ಸುಲಭವಾಗಿ ತೂಕ ಇಳಿಸಿಕೊಳ್ಳಲು ಇಲ್ಲಿದೆ ಒಂದಿಷ್ಟು ಆಯುರ್ವೇದ ಸಲಹೆ.
ಅರಿಸಿನವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಕೊಬ್ಬು ಕರಗಿಸುವ ಗುಣವು ಅರಿಸಿನಕ್ಕಿದೆ. ಅದಕ್ಕಾಗಿ ಹಾಲು ಅಥವಾ ನೀರಿಗೆ ಅರಿಸಿನ ಸೇರಿಸಿ ಅದನ್ನು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
ತ್ರಿಫಲ ಚೂರ್ಣ ತೂಕ ನಷ್ಟಕ್ಕೆ ತುಂಬಾನೇ ಸಹಕಾರಿ. ಒಂದು ಲೋಟ ನೀರು ಬಿಸಿ ಮಾಡಲು ಇಟ್ಟು ಅದಕ್ಕೆ ಸ್ವಲ್ಪ ತ್ರಿಫಲ ಚೂರ್ಣ ಸೇರಿಸಿ. ಆ ನೀರು ಅರ್ಧ ಗ್ಲಾಸ್ ಆಗುವವರೆಗೂ ಕುದಿಸಿ. ನಂತರ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ.
ತೂಕ ಇಳಿಸಿಕೊಳ್ಳಲು ನೀರು ಕುಡಿಯುವುದು ಕೂಡ ಮುಖ್ಯವಾಗುತ್ತದೆ. ಆಯುರ್ವೇದ ತಜ್ಞರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯಲು ಸಲಹೆ ನೀಡುತ್ತಾರೆ.
ಆಯುರ್ವೇದದ ಪ್ರಕಾರ ಸೂರ್ಯಾಸ್ತಕ್ಕೂ ಮುನ್ನ ರಾತ್ರಿಯೂಟ ಮಾಡುವುದು ಉತ್ತಮ. ಅಂದರೆ ಸಂಜೆ 7 ಗಂಟೆಯ ಒಳಗೆ ಊಟ ಮಾಡಬೇಕು. ನಂತರ ಏನ್ನನ್ನೂ ತಿನ್ನಬಾರದು.
ನಮ್ಮ ಆಹಾರಕ್ರಮದಲ್ಲಿ ಹಣ್ಣು, ತರಕಾರಿ, ಹಾಲು ಮತ್ತು ಮೊಸರು ಸೇರಿಸುವುದು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಬೊಜ್ಜು ಕಡಿಮೆಯಾಗುತ್ತದೆ. ಮಸಾಲೆಯುಕ್ತ ಹಾಗೂ ಜಂಕ್ ಫುಡ್ ಸೇವನೆಯ ಎಂದಿಗೂ ಸಲ್ಲ.