ಆದಷ್ಟು ಬೇಗ ತೂಕ ಇಳಿಬೇಕು ಅಂದ್ರೆ ಈ ಹಣ್ಣುಗಳನ್ನು ಸೇವಿಸಿ

By Reshma
Jun 20, 2024

Hindustan Times
Kannada

ತೂಕ ಇಳಿಸಿಕೊಳ್ಳುವುದು ಹಾಗೂ ಸ್ಥೂಲಕಾಯದ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬೇಕು ಅಂದ್ರೆ ನಾವು ಸೇವಿಸುವ ಆಹಾರಕ್ರಮದ ಮೇಲೆ ಗಮನ ಹರಿಸಬೇಕು.

ಇದರೊಂದಿಗೆ ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡುವುದು ಅವಶ್ಯ. 

ಆದಷ್ಟು ಬೇಗ ನಿಮ್ಮ ತೂಕ ಕಡಿಮೆ ಆಗಬೇಕು ಅಂದ್ರೆ ಕೆಲವು ಹಣ್ಣುಗಳನ್ನು ಸೇವಿಸಬೇಕು. 

ತೂಕ ಕಡಿಮೆ ಮಾಡಲು ಪ್ರಯೋಜನಕಾರಿ ಎಂದು ಪರಿಗಣಿಸಲಾದ ಹಣ್ಣುಗಳ ಬಗ್ಗೆ ತಿಳಿಯಬೇಕಾದ ಮಾಹಿತಿಯಿದು. 

ಸ್ಟ್ರಾಬೆರಿ: ಇದರಲ್ಲಿ ನಾರಿನಾಂಶ ಸಮೃದ್ಧವಾಗಿದ್ದು, ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಈ ಹಣ್ಣನ್ನು ಹೆಚ್ಚು ಹೆಚ್ಚು ಸೇವಿಸಬೇಕು. 

ಪೇರಳೆ ಹಣ್ಣು ಕೂಡ ತೂಕ ಇಳಿಕೆಗೆ ಹೇಳಿ ಮಾಡಿಸಿದ್ದು. ಇದು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಪ್ರತಿನಿತ್ಯ ತಿನ್ನುವುದು ಉತ್ತಮ. 

ನಾರಿನಾಂಶ ಮತ್ತು ವಿಟಮಿನ್‌ ಸಿಯಲ್ಲಿ ಸಮೃದ್ಧವಾಗಿರುವ ಸೇಬು ತೂಕ ನಷ್ಟಕ್ಕೆ ಸಹಾಯಕವಾಗಿದೆ. 

ಪಿಯರ್ಸ್‌ ಕೂಡ ತೂಕ ಇಳಿಸಿಕೊಳ್ಳಲು ಹೇಳಿ ಮಾಡಿಸಿದ್ದು. ಇದು ಜೀರ್ಣಕ್ರಿಯೆಯನ್ನು ವೃದ್ಧಿಸಿ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. 

ತಜ್ಞರ ಪ್ರಕಾರ ಪ್ರತಿದಿನ, ಸರಿಯಾದ ಪ್ರಮಾಣದಲ್ಲಿ ಸೀಮಿತವಾಗಿ ಬಾಳೆಹಣ್ಣು ತಿನ್ನುವುದರಿಂದ ತೂಕ ಕಡಿಮೆ ಮಾಡಲು ಸಹಾಯವಾಗುತ್ತದೆ. 

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದ್ದಾಗಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಒಲಿಂಪಿಕ್ಸ್‌: ಡ್ರಗ್ ಪ್ರಕರಣದಲ್ಲಿ ಅನರ್ಹಗೊಂಡ ಮೊದಲ ಕ್ರೀಡಾಪಟು ಯಾರು?