ತೂಕ ಇಳಿಸೋಕೆ ಬೆಸ್ಟ್‌ ಚೇಪೆ ಕಾಯಿ, ಇದರ ಅದ್ಭುತ ಆರೋಗ್ಯ ಪ್ರಯೋಜನಗಳಿವು

By Reshma
Mar 11, 2024

Hindustan Times
Kannada

ಪೇರಳೆ, ಚೇಪೆ ಅಥವಾ ಸೀಬೆ ಎಂದು ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಈ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ.

ಇದರಲ್ಲಿ ವಿಟಮಿನ್‌ ಸಿ, ಲೈಕೊಪಿನ್‌, ಸೋಡಿಯಂ, ಪೊಟ್ಯಾಶಿಯಂ, ಪ್ರೊಟೀನ್‌ಗಳು, ಉತ್ಕರ್ಷಣ ನಿರೋಧಕಗಳಲ್ಲಿ ಇಂದು ಸಮೃದ್ಧವಾಗಿದೆ. 

ಗುಲಾಬಿ ತಿರುಗಳಿನ ಸೀಬೆ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಿಂದ ನೀರಿನಾಂಶ ಸಾಕಷ್ಟಿದೆ. ಅಲ್ಲದೇ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್‌ ಅಂಶ ಕಡಿಮೆ ಇರುತ್ತದೆ. 

ಗುಲಾಬಿ ಪೇರಳೆಯಲ್ಲಿ ಆಂಟಿಆಕ್ಸಿಡೆಂಟ್‌ ಅಂಶ ಅಧಿಕವಾಗಿರುತ್ತದೆ. ಇದರಲ್ಲಿ ನಾರಿನಾಂಶವೂ ಹೇರಳವಾಗಿರುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. 

ಇದರಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಲು ಸಹಾಯ ಮಾಡುತ್ತದೆ. 

ಇದು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹದಲ್ಲಿ ಗಾಯಗಳು ಬೇಗ ಗುಣವಾಗಲು ಇದು ಸಹಕಾರಿ. 

ಇದರಲ್ಲಿನ ಉತ್ತಮ ನಾರಿನಾಂಶ ಹಾಗೂ ನೀರಿನಾಂಶದ ಕಾರಣ ಇದು ದೇಹ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಗುಲಾಬಿ ತಿರುಳಿನ ಪೇರಳೆಯಲ್ಲಿ ಪೊಟ್ಯಾಶಿಯಂ ಅಂಶವು ಸಮೃದ್ಧವಾಗಿದ್ದು ಇದು ರಕ್ತದೊತ್ತಡ ನಿವಾರಣೆಗೂ ಸಹಕಾರಿ. 

ಸತತ 6 ಸಿಕ್ಸರ್ ಬಾರಿಸಿದ್ದ ಈ ಪ್ರಿಯಾನ್ಶ್ ಆರ್ಯ ಯಾರು?