ರಾಗಿ ಅಂಬಲಿ ಪೌಷ್ಟಿಕ ಗುಣಗಳಿಗೆ ಹೆಸರುವಾಸಿ. ಜೀವಸತ್ವಗಳು, ಮಿನರಲ್ಸ್, ಕಾರ್ಬೋಹೈಡ್ರೇಟ್ಸ್, ಫೈಬರ್, ಕ್ಯಾಲ್ಸಿಯಂ ಇದರಲ್ಲಿ ಅಧಿಕವಾಗಿದೆ.
ರಾಗಿ ಅಂಬಲಿಯನ್ನು ರಾಗಿ ಹಿಟ್ಟು, ನೀರು ಮತ್ತು ಮೊಸರಿನಿಂದ ತಯಾರಿಸಬಹುದು. ಉಪಾಹಾರ, ಮಧ್ಯಾಹ್ನ ಅಥವಾ ಸಂಜೆಯ ಸಮಯದಲ್ಲಿ ಕುಡಿಯುತ್ತಾರೆ.
ರಾಗಿ ಅಂಬಲಿಯಲ್ಲಿ ನಾರಿನಾಂಶ ಅಧಿಕವಾಗಿದೆ. ಇದು ಉತ್ತಮ ಜೀರ್ಣ ಕ್ರಿಯೆಗೆ ಸಹಕಾರಿ. ಚರ್ಮ ಮತ್ತು ಕೂದಲಿನ ಆರೋಗ್ಯ ಸುಧಾರಿಸುತ್ತದೆ. ವಿಟಮಿನ್ ಇ ಇದೆ.
ರಾಗಿ ಅಂಬಲಿಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಪ್ರಯೋಜನಕಾರಿ. ಪ್ರತಿ ದಿನವೂ ಕುಡಿದರೆ ಮಧುಮೇಹದ ಅಪಾಯ ತುಂಬಾ ಕಡಿಮೆ.
ರಾಗಿಯಲ್ಲಿ ಕಬ್ಭಿಣಾಂಶ ಹೆಚ್ಚಾಗಿದ್ದು, ರಕ್ತ ಹೀನತೆ ಮತ್ತು ಕಡಿಮೆ ಹಿಮಗ್ಲೋಬಿನ್ ಮಟ್ಟವನ್ನು ಹೊಂದಿರುವವರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
ತೂಕ ಹೆಚ್ಚಿಸಿಕೊಳ್ಳಲು ಇಚ್ಚಿಸುವವರಿಗೆ ರಾಗಿ ಅಂಬಲಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ದಿನವಿಡೀ ಉಲ್ಲಾಸಭರಿತರಾಗುವಂತೆ ಮಾಡುತ್ತದೆ.