ಶುಂಠಿಯು ಪುರುಷರು ಹಾಗೂ ಮಹಿಳೆಯರಲ್ಲಿ ಫಲವಂತಿಕೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತು ಮಾಡಿವೆ.
ಶುಂಠಿ ಬಳಕೆಯಿಂದ ಪುರುಷರಲ್ಲಿ ವೀರ್ಯ ಕೋಶಗಳ ಸಾಂಧ್ರತೆ ಮತ್ತು ಚಲನಶೀಲತೆ ಸುಧಾರಿಸುತ್ತದೆ. ಇದು ವೀರ್ಯದ ಗುಣಮಟ್ಟವನ್ನು ಧನಾತ್ಮಕವಾಗಿ ಸುಧಾರಿಸುತ್ತದೆ.
ಶುಂಠಿಯು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಲೈಂಗಿಕ ಪ್ರಚೋದನೆ ಹಾಗೂ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.
ಶುಂಠಿಯು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ರಕ್ತನಾಳಗಳ ಹಿಗ್ಗಿಸುವಿಕೆಯನ್ನು ಹೆಚ್ಚಿಸುವ ಮೂಲಕ ಉತ್ತಮ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಇದು ಪ್ರಚೋದನೆಯನ್ನು ವೃದ್ಧಿಸುತ್ತದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಶುಂಠಿಯು ಲ್ಯುಟೈನೈಜಿಂಗ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಟೆಸ್ಟೊಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಶುಂಠಿಯು ಉರಿಯೂತ ನಿವಾರಕ ಸಂಯುಕ್ತಗಳನ್ನು ಹೊಂದಿದೆ. ಇದು ಪುರುಷರಿಗೆ ಕೀಲು, ಮೆದುಳಿನ ಆರೋಗ್ಯ ಸುಧಾರಣೆಯ ಜೊತೆಗೆ ಕಾಮಾಸಕ್ತಿ ಹೆಚ್ಚಲು ಸಹಕಾರಿ ಎನ್ನಲಾಗಿದೆ.
ಶುಂಠಿಯನ್ನು ಸೇವನೆಯಿಂದ ಲೈಂಗಿಕ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ನಿಜ, ಆದರೆ ಮಿತವಾಗಿ ಸೇವಿಸುವುದನ್ನು ಮರೆಯಬೇಡಿ.
ಹೆಚ್ಚು ಆದಾಯ ಗಳಿಸಲು ಕೌಶಲ್ಯ ಕಲಿಸುವ 6 ಉಚಿತ ಆನ್‌ಲೈನ್ ಕೋರ್ಸ್‌ಗಳು