ಪ್ರತಿದಿನ ನಿದ್ದೆ ಕಡಿಮೆ ಮಾಡೋದ್ರಿಂದ ಇಷ್ಟೆಲ್ಲಾ ಸಮಸ್ಯೆಗಳು ಎದುರಾಗುತ್ತೆ   

By Reshma
Aug 20, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಹಲವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್‌ ನಡುವೆ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಮಲಗಿ ಎಷ್ಟೋ ಹೊತ್ತಾದ ಮೇಲೆ ನಿದ್ದೆ ಬರುತ್ತೆ

ನಿದ್ರಾಹೀನತೆಗೆ ಕಾರಣಗಳು ಹಲವಿರಬಹುದು. ಒತ್ತಡ, ಖಿನ್ನತೆ, ಆತಂಕ ಇತ್ಯಾದಿಗಳು ನಿದ್ದೆಯ ಕೊರತೆಗೆ ಕಾರಣವಾಗುತ್ತವೆ. ಸರ್ಮಪಕ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಯ ಕೊರತೆಯು ನಿದ್ದೆ ಸಮಸ್ಯೆ ಉಂಟಾಗಲು ಕಾರಣವಾಗಬಹುದು 

ಆರೋಗ್ಯ ತಜ್ಞರ ಪ್ರಕಾರ ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿ ದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಇದಕ್ಕಿಂತ ಕಡಿಮೆ ಅವಧಿಯಲ್ಲಿ ನಿದ್ದೆ ಮಾಡಿದ್ರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರೋದು ಖಂಡಿತ. 

ದಿನಕ್ಕೆ 7 ಗಂಟೆಗಿಂತ ಕಡಿಮೆ ನಿದ್ರೆ ಮಾಡುವುದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಡಿಮೆ ನಿದ್ದೆ ಮಾಡಿದ್ರೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ನೋಡಿ 

ತಜ್ಞರ ಪ್ರಕಾರ 7 ಗಂಟೆಗಿಂತ ಕಡಿಮೆ ನಿದ್ದೆ ಮಾಡಿದ್ರೆ ಜ್ಞಾಪಕ ಶಕ್ತಿ ದುರ್ಬಲವಾಗಬಹುದು

ನಿದ್ದೆಯ ಕೊರತೆಯಿಂದ ದುಃಖ, ಕಿರಿಕಿರಿ, ಪದೇ ಪದೇ ಕೋಪ ಬರುವುದು ಇಂತಹ ಸಂಗತಿಗಳು ಸಾಮಾನ್ಯ 

ಪ್ರತಿನಿತ್ಯ ಕಡಿಮೆ ಪ್ರಮಾಣದಲ್ಲಿ ನಿದ್ದೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಅನಾರೋಗ್ಯದ ಪರಿಸ್ಥಿತಿ ಹೆಚ್ಚುತ್ತದೆ

ಪ್ರತಿನಿತ್ಯ ಕಡಿಮೆ ಪ್ರಮಾಣದಲ್ಲಿ ನಿದ್ದೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಅನಾರೋಗ್ಯದ ಪರಿಸ್ಥಿತಿ ಹೆಚ್ಚುತ್ತದೆ 

ಸಾಕಷ್ಟು ನಿದ್ದೆ ಮಾಡದೇ ಇರುವುದು ಕಣ್ಣುಗಳ ಕೆಳಗೆ ಕಪ್ಪು ವೃತ್ತ ಬರಲು ಕಾರಣವಾಗಬಹುದು. ಇದರಿಂದ ಚರ್ಮದ ಹೊಳಪು ಕಡಿಮೆಯಾಗಬಹುದು. ಹೊಳೆಯುವ ಚರ್ಮಕ್ಕೆ ನಿದ್ದೆ ಬಹಳ ಮುಖ್ಯ

ದೀರ್ಘಕಾಲ ಕಡಿಮೆ ನಿದ್ದೆ ಮಾಡುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಬಹುದು. ಕೊಲೆಸ್ಟ್ರಾಲ್‌ ಮಟ್ಟದಲ್ಲಿ ಏರಿಕೆಯಾಗುವ ಸಾಧ್ಯತೆಯೂ ಇದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳೂ ಹೆಚ್ಚುತ್ತವೆ 

ಈ ಸುದ್ದಿಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ  

ದುರ್ಗಾ ಉಪಾಸನೆ ಮಾಡುವುದು ಹೇಗೆ? ಇಲ್ಲಿದೆ ಸಲಹೆ