ಊಟದ ನಂತರ ಚಹಾ, ಕಾಫಿ ಸೇವನೆಯಿಂದ ದೇಹಕ್ಕಾಗುವ ತೊಂದರೆಗಳಿವು 

By Reshma
Apr 15, 2024

Hindustan Times
Kannada

ಭಾರತದಲ್ಲಿ ಹಲವರು ಚಹಾ ಪ್ರಿಯರಿದ್ದಾರೆ. ಬೆಳಗಿನ ಹೊತ್ತು ಚಹಾ, ಕಾಫಿ ಕುಡಿಯದೇ ಅವರಿಗೆ ದಿನ ಆರಂಭವಾಗುವುದೇ ಇಲ್ಲ. 

ಕೆಲವರು ಬೆಳಿಗ್ಗೆ ಮಧ್ಯಾಹ್ನ ಹಾಗೂ ಸಂಜೆ ಮೂರು ಬಾರಿ ಚಹಾ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಇನ್ನೂ ಕೆಲವರು ಊಟದ ನಂತರ ಚಹಾ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. 

ಆದರೆ ಊಟದ ನಂತರ ಚಹಾ ಕುಡಿಯುವುದು ಆರೋಗ್ಯಕ್ಕೆ ಉತ್ತಮವೋ ಅಲ್ಲವೋ ಎಂಬ ಬಗ್ಗೆ ಗೊಂದಲ ಹಲವರಲ್ಲಿರುವುದು ಸಹಜ.

ಆರೋಗ್ಯ ತಜ್ಞರ ಪ್ರಕಾರ ರಾತ್ರಿ ಊಟದ ಬಳಿಕ ತಪ್ಪಿಯೂ ಚಹಾ ಕುಡಿಯಬಾರದು. ಇದರಿಂದ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ. 

ರಾತ್ರಿ ಊಟದ ನಂತರ ಚಹಾ ಕುಡಿಯುವುದರಿಂದ ನಿದ್ದೆಗೆ ಭಂಗ ಉಂಟಾಗುತ್ತದೆ. ನಿದ್ರಾಹೀನತೆಯು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಪ್ರತಿದಿನ ರಾತ್ರಿ ಊಟದ ನಂತರ ಚಹಾ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಉಂಟಾಗುತ್ತದೆ. ಆಸಿಡಿಟಿ, ಗ್ರ್ಯಾಸ್ಟಿಕ್‌ನಂತಹ ಸಮಸ್ಯೆಗಳು ಎದುರಾಗಬಹುದು. 

ರಾತ್ರಿಯೂಟದ ನಂತರ ಚಹಾ, ಕಾಫಿ ಕುಡಿಯುವುದು ರಕ್ತದಲ್ಲಿನ ಸಕ್ಕರೆ ಅಂಶ ಏರಿಕೆಗೂ ಕಾರಣವಾಗಬಹುದು. 

ಪ್ರತಿದಿನ ರಾತ್ರಿ ಊಟದ ನಂತರ ಚಹಾ ಕುಡಿಯುವುದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ಹೆಚ್ಚಲು ಕಾರಣವಾಗಬಹುದು. ಇದರಿಂದ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. 

ಆರೋಗ್ಯ ತಜ್ಞರ ಪ್ರಕಾರ ರಾತ್ರಿ ಊಟದ ನಂತರ ನಿರಂತರವಾಗಿ ಚಹಾ ಕುಡಿಯುವ ಅಭ್ಯಾಸ ಇರುವವರಲ್ಲಿ ಬೊಜ್ಜಿನ ಸಮಸ್ಯೆಯು ಹೆಚ್ಚಬಹುದು. ಒಟ್ಟಾರೆ ಊಟದ ನಂತರ ಚಹಾ ಕುಡಿಯುವುದು ಹೃದಯದ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಇದು ತಲೆನೋವು ಹಾಗೂ ಒತ್ತಡಕ್ಕೂ ಕಾರಣವಾಗಬಹುದು. 

ಈ ಸುದ್ದಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ. 

ಕ್ವಾಲಿಫೈಯರ್​-2 ಪಂದ್ಯ; ಆರ್​​ಆರ್​​ vs ಎಸ್​ಆರ್​ಹೆಚ್ ಮುಖಾಮುಖಿ