ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿದ್ರೆ ಏನಾಗುತ್ತೆ?

By Reshma
Sep 01, 2024

Hindustan Times
Kannada

ಪೋಷಕಾಂಶಗಳಿಂದ ತುಂಬಿರುವ ಹಾಲನ್ನು ಪೂರಕ ಆಹಾರ ಎಂದು ಕರೆಯಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. 

ಪ್ರೊಟೀನ್‌, ಕ್ಯಾಲ್ಸಿಯಂ ಹಾಗೂ ಇತರ ಖನಿಜಾಂಶಗಳು ಹಾಲಿನಲ್ಲಿ ಹೇರಳವಾಗಿ ಕಂಡುಬರುತ್ತದೆ. 

ಪ್ರತಿದಿನ ಹಾಲು ಕುಡಿಯುವುದರಿಂದ ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು

ಹಾಲಿ ಕುಡಿಯುವುದರಿಂದ ದೇಹಕ್ಕೆ ಚೈತನ್ಯ ಬರುತ್ತದೆ. ಶಕ್ತಿ ಒದಗುತ್ತದೆ. ಹಾಲಿನಲ್ಲಿರುವ ಪೋಷಕಾಂಶಗಳು ಸ್ಮರಣ ಶಕ್ತಿ ಹೆಚ್ಚಲು ಕೂಡ ಸಹಕಾರಿ.

ಪ್ರೊಟೀನ್ ಸಮೃದ್ಧ ಹಾಲನ್ನು ನಿರಂತರವಾಗಿ ಸೇವಿಸುವುದರಿಂದ ತೂಕ ಇಳಿಕೆಯಾಗುತ್ತದೆ ಎಂದು ಕೂಡ ಹೇಳಲಾಗುತ್ತದೆ 

ಇಷ್ಟೆಲ್ಲಾ ಪ್ರಯೋಜನಗಳ ಹೊರತಾಗಿಯೂ ಹಾಲನ್ನು ಸೇವಿಸುವ ಕ್ರಮದಲ್ಲಿ ವ್ಯತ್ಯಾಸವಿದ್ದರೆ ಇದು ನಿಮಗೆ ಹಾನಿಕರವಾಗಿರಬಹುದು 

ಆರೋಗ್ಯ ತಜ್ಞರ ಪ್ರಕಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವಂತಿಲ್ಲ

ಇದು ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಕಾರಣವಾಗಬಹುದು 

ಆದರೆ ಚಿಕ್ಕ ಮಕ್ಕಳಿಗೆ ಯಾವುದೇ ಸಮಯದಲ್ಲಿ ಬೇಕಾದರೂ ಹಾಲು ಕೊಡಬಹುದು. ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಅವರಿಗೆ ಹಾನಿಕರವಲ್ಲ

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ಮಾಜಿ ಪ್ರೇಯಸಿ ವರ್ಷಾ ಕಾವೇರಿ ವಿರುದ್ಧ ವರುಣ್‌ ಆರಾಧ್ಯ ಆರೋಪ

PC: Varun Aradhya FB