ಡೆಂಗ್ಯೂ ಬಂದಾಗ ಏನು ತಿನ್ನಬೇಕು? ಏನು ತಿನ್ನಬಾರದು?

By Raghavendra M Y
Jun 29, 2024

Hindustan Times
Kannada

ಮುಂಗಾರು ಆರಂಭವಾಗುತ್ತಿದ್ದಂತೆ ಎಲ್ಲರಿಗೂ ಡೆಂಗ್ಯೂ ಭೀತಿ ಶುರುವಾಗುತ್ತದೆ. ಇದೊಂದು ಮಾರಣಾಂತಿಕ ಕಾಯಿಲೆಯಾಗಿದೆ

ಸೊಳ್ಳೆಯಿಂದ ಹರಡುವ ಈ ರೋಗದ ಲಕ್ಷಣಗಳು ಹಾಗೂ ತಡೆಗಟ್ಟುವ ವಿಧಾನವನ್ನು ತಿಳಿದರೆ ಅಪಾಯದಿಂದ ಪಾರಾಗಬಹುದು

ಡೆಂಗ್ಯೂ ಈಡಿಸ್ ಸೊಳ್ಳೆಗಳಿಂದ ಬರುತ್ತದೆ. ಸೊಳ್ಳೆ ಕಚ್ಚಿದಾಗ ತೀವ್ರ ಜ್ವರ, ತಲೆನೋವು, ದದ್ದು, ಕೀಲು ಮತ್ತು ಸ್ನಾಯು ನೋವಿನ ಲಕ್ಷಣಗಳು ಕಂಡು ಬರುತ್ತವೆ

ಡೆಂಗ್ಯೂ ಬಂದಾಗ ಏನು ತಿನ್ನಬೇಕು? ಏನು ತಿನ್ನಬಾರದು? ಅನ್ನೋದನ್ನು ಇಲ್ಲಿ ತಿಳಿಯೋಣ

ಪಪ್ಪಾಯಿ ಎಲೆ- ಇದು ಡೆಂಗ್ಯೂ ರೋಗಿಯ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಪ್ಲೇಟ್‌ಲೆಟ್ ಹೆಚ್ಚಿಸಲು ಸಹಾಯ ಮಾಡುತ್ತದೆ

ಗಿಡಮೂಲಿಕೆಗಳ ಮಿಶ್ರಣ- ತುಳಸಿ, ಅಶ್ವಗಂಧ, ಶುಂಠಿ, ಅಲೋವೆರಾವನ್ನು ನಿಯಮಿತವಾಗಿ ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ

ದಾಳಿಂಬೆ, ಎಳೆನೀರು, ಅರಿಶಿನ, ಮೆಂತ್ಯ ನೀರು, ಕಿತ್ತಲೆ ಜ್ಯೂಸ್ ಕೂಡ ಡೆಂಗ್ಯೂ ನಿಯಂತ್ರಣಕ್ಕೆ ನೆರವಾಗುತ್ತವೆ. ಈ ಪದಾರ್ಥಗಳ ಸೇವನೆಗೆ ವೈದ್ಯರು ಸಲಹೆ ನೀಡುತ್ತಾರೆ

ಡೆಂಗ್ಯೂ ಬಂದಾಗ ಮಾಂಸಾಹಾರಿ ಆಹಾರ, ಎಣ್ಣೆಯಲ್ಲಿ ಹುರಿದ ಆಹಾರ, ಮಸಾಲೆ ಆಹಾರ, ಕೆಫೀನ್ ಮಾಡಿದ ಪಾನೀಯಗಳನ್ನು ತಪ್ಪಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ

ಆಯುರ್ವೇದದಲ್ಲಿ ಅಮೃತ ಎಂದೇ ಕರೆಸಿಕೊಳ್ಳುವ 9 ಆಹಾರ ಪದಾರ್ಥಗಳಿವು