ಈ ಸಮಸ್ಯೆ ಇರುವವರು ತಪ್ಪಿಯೂ ವಾಲ್‌ನಟ್ ತಿನ್ನಬಾರದು
By Reshma
Mar 15, 2025
Hindustan Times
Kannada
ಒಣಹಣ್ಣುಗಳಲ್ಲಿ ವಾಲ್‌ನಟ್‌ಗೆ ವಿಶೇಷ ಸ್ಥಾನವಿದೆ. ಇದು ಪೋಷಕಾಂಶ ಸಮೃದ್ಧವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಆರೋಗ್ಯಕ್ಕೆ ಹಾನಿಯನ್ನೂ ಉಂಟು ಮಾಡಬಹುದು
ವಾಲ್‌ನಟ್ ಹೆಚ್ಚು ತಿನ್ನುವುದರಿಂದ ತೂಕ ಹೆಚ್ಚಲು ಸಾಧ್ಯತೆ ಇದೆ. ಇದರಲ್ಲಿ ಕ್ಯಾಲೊರಿ ಅಂಶ ಹೆಚ್ಚಿರುತ್ತದೆ
ವಾಲ್‌ನಟ್‌ನಲ್ಲಿ ಬಹುಅಪರ್ಯಾಪ್ತ ಕೊಬ್ಬಿನಾಂಶ ಹೆಚ್ಚಿರುತ್ತದೆ. ಇದು ಆಕ್ಸೀಡಿಕರಣಕ್ಕೆ ಕಾರಣವಾಗಬಹುದು
ವಾಲ್‌ನಟ್‌ನಲ್ಲಿ ಫೈಟೇಟ್‌ಗಳಿವೆ. ಇದು ಖನಿಜ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಪೌಷ್ಟಿಕಾಂಶದ ಸಮಸ್ಯೆಯನ್ನೂ ಉಂಟು ಮಾಡಬಹುದು
ಒಣಹಣ್ಣುಗಳ ಅಲರ್ಜಿ ಇರುವವರು ವಾಲ್‌ನಟ್ ತಿನ್ನಬಾರದು. ಇದು ಚರ್ಮದ ಕಿರಿಕಿರಿಗೆ ಕಾರಣವಾಗಬಹುದು
ವಾಲ್‌ನಟ್‌ಗಳು ಟ್ಯಾನಿನ್‌ಗಳನ್ನು ಹೊಂದಿದ್ದು ಅತಿಸಾರ, ಹೊಟ್ಟೆಯುಬ್ಬರದಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು
ರಕ್ತ ತೆಳುವಾಗಿಸುವ ಔಷಧಿ ಸೇವಿಸುವವರು ವಾಲ್‌ನಟ್ ಸೇವನೆಯನ್ನು ಮಿತಿಗೊಳಿಸಬೇಕು. ಯಾಕೆಂದರೆ ಇದು ರಕ್ತಸ್ರಾವವನ್ನು ಹೆಚ್ಚಿಸುತ್ತದೆ
ಗರ್ಭಿಣಿಯರು ವಾಲ್‌ನಟ್ ಅನ್ನು ಎಚ್ಚರಿಕೆಯಿಂದ ಸೇವಿಸಬೇಕು. ಇದು ಅಲರ್ಜಿ ಉಂಟು ಮಾಡುವ ಸಾಧ್ಯತೆ ಇದೆ
ವಾಲ್‌ನಟ್‌ನ ಅತಿಯಾದ ಸೇವನೆಯು ಬಾಯಿ, ಗಂಟಲು ಹಾಗೂ ನಾಲಿಗೆ ಊತಕ್ಕೆ ಕಾರಣವಾಗಬಹುದು. ಇದನ್ನು ಓರಲ್ ಅಲರ್ಜಿ ಸಿಂಡ್ರೋಮ್ ಎಂದು ಕರೆಯುತ್ತಾರೆ
ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ವಿಷಯಗಳನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ
ವಿಶ್ವ ವಿಖ್ಯಾತ ಹೋಗ ಜಲಪಾತ ಪ್ರವಾಸಿಗರ ವೀಕ್ಷಣೆಗೆ ಲಭ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ