ಹಲವು ಆರೋಗ್ಯ ಪ್ರಯೋಜನಗಳಿರುವ ಎಳನೀರನ್ನು ಈ ಸಮಸ್ಯೆಗಳಿದ್ದವರು ಕುಡಿಯಬಾರದು

freepik

By Priyanka Gowda
Oct 02, 2024

Hindustan Times
Kannada

ಎಳನೀರು ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ದೇಹ ಹೈಡ್ರೇಟ್ ಆಗಿರಿಸುವಲ್ಲಿ ಇದು ಸಹಾಯಕವಾಗಿದೆ.

freepik

ದೇಹದಲ್ಲಿನ ಮೆಗ್ನೀಸಿಯಂ, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಕಬ್ಬಿಣ, ತಾಮ್ರ ಇತ್ಯಾದಿ ಅಂಶಗಳ ಕೊರತೆಯನ್ನು ಎಳನೀರು ನೀಗಿಸುತ್ತದೆ.

freepik

ಎಳನೀರು ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳಿದ್ದರೂ, ಇದು ಕೆಲವರಿಗೆ ಹಾನಿಕಾರಕವಾಗಿದೆ. 

freepik

ಕಿಡ್ನಿ ಸಂಬಂಧಿ ಕಾಯಿಲೆಯಿದ್ದವರು ಎಳನೀರನ್ನು ಸೇವಿಸುವುದು ಒಳ್ಳೆಯದಲ್ಲ. ಇದರಲ್ಲಿರುವ ಪೊಟ್ಯಾಸಿಯಮ್ ಮೂತ್ರಪಿಂಡಗಳಿಗೆ ಹಾನಿಕಾರಕವಾಗಿದೆ.

freepik

ಹೃದಯ ಸಂಬಂಧಿ ಸಮಸ್ಯೆ ಇರುವವರು ಕೂಡ ಎಳನೀರು ಕುಡಿಯಬಾರದು ಎಂಬುದು ವೈದ್ಯರ ಸಲಹೆ. ಇದರಿಂದ ರಕ್ತದೊತ್ತಡ ಹೆಚ್ಚಾಗುವ ಸಂಭವವಿರುತ್ತದೆ.

freepik

ಶೀತ ಮತ್ತು ಕೆಮ್ಮು ಇರುವಾಗ ಎಳನೀರು ಸೇವನೆ ಮಾಡಬಾರದು. ಯಾಕೆಂದರೆ ಇದು ತಂಪಾಗಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು.

freepik

ಯಾವುದೇ ರೀತಿಯ ಅಲರ್ಜಿಯಿಂದ ಬಳಲುತ್ತಿದ್ದರೆ ಅಂಥವರು ಕೂಡ ಎಳನೀರನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

freepik

ಎಳನೀರಿನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಹೀಗಾಗಿ ಮಧುಮೇಹಿಗಳು ಎಳನೀರನ್ನು ಕುಡಿಯುವುದು ಉತ್ತಮವಲ್ಲ.

freepik

ವಿಷಯ ಸೂಚನೆ: ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾವುದೇ ನಿರ್ದಿಷ್ಟ ಮಾಹಿತಿಗಾಗಿ ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ.

freepik

ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಬಹುದು ರುಚಿಕರವಾದ ಸಬ್ಬಕ್ಕಿ ಹಪ್ಪಳ

slurrp