ಕಟ್ಟಿದ ಮೂಗಿನ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು
By Reshma
Jan 06, 2025
Hindustan Times
Kannada
ಚಳಿಗಾಲದ ಅವಧಿಯಲ್ಲಿ ಸಾಮಾನ್ಯ ಶೀತದ ಸಮಸ್ಯೆ ಸಹಜ. ಶೀತ ವಾತಾವರಣ ಅಥವಾ ತಣ್ಣನೆಯ ಪದಾರ್ಥ ತಿನ್ನುವುದರಿಂದ ಶೀತ, ನೆಗಡಿಯಾಗುತ್ತದೆ
ಈ ಸಮಯದಲ್ಲಿ ಕಟ್ಟಿದ ಮೂಗಿನ ಸಮಸ್ಯೆಯಿಂದ ಉಸಿರಾಟ, ನಿದ್ದೆಗೆ ತೊಂದರೆಯಾಗುತ್ತದೆ
ನೀವು ಕಟ್ಟಿದ ಮೂಗಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದರೆ ನಿವಾರಣೆಗೆ ಈ ಸರಳ ಮನೆಮದ್ದು ಅನುಸರಿಸಿ
ಬಿಸಿನೀರಿಗೆ ಉಪ್ಪು ಹಾಕಿ ಹಬೆ ತೆಗೆದುಕೊಳ್ಳಿ, ವಿಕ್ಸ್ ಹಾಕುವ ಬದಲು ಉಪ್ಪು ಹಾಕುವುದರಿಂದ ತಕ್ಷಣ ಪರಿಹಾರ ಕಂಡುಕೊಳ್ಳಬಹುದು
ಮೂಗಿನ ದಟ್ಟಣೆಯನ್ನು ನಿವಾರಿಸಲು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಕಟ್ಟಿದ ಮೂಗಿನ ಸಮಸ್ಯೆ ನಿವಾರಣೆಗೆ ಸಹಕಾರಿ
ಏಲಕ್ಕಿ, ಕಾಳುಮೆಣಸು, ತುಳಸಿ ಎಲೆಗಳು ಮತ್ತು ದಾಲ್ಚಿನ್ನಿ ಹಾಕಿದ ನೀರನ್ನು ಕುದಿಸಿ ಕುಡಿಯುವುದರಿಂದಲೂ ಮೂಗು ಕಟ್ಟಿದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು
ಮೂಗು ಕಟ್ಟಿದ ಸಮಸ್ಯೆಗೆ ಬಿಸಿಯಾದ ಚಹಾ, ಸೂಪ್ ಕುಡಿಯುವುದು ಕೂಡ ಪರಿಹಾರ ನೀಡುತ್ತದೆ
ಕಟ್ಟಿದ ಮೂಗಿನ ಸಮಸ್ಯೆ ಇದ್ದಾಗ ಒಂದು ಮಗ್ಗುಲಲ್ಲಿ ಮಲಗುವುದು ಕೂಡ ಪರಿಹಾರ ಕಂಡುಕೊಳ್ಳಬಹುದು
ಮೂಗು ಕಟ್ಟಿದ ಸಮಸ್ಯೆ ಇದ್ದರೆ ಸ್ಪ್ರೇ ಸಿಂಪಡಿಸಿಕೊಳ್ಳುವ ಮೂಲಕವು ಪರಿಹಾರ ಕಂಡುಕೊಳ್ಳಬಹುದು
ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ
ದೇಹವನ್ನು ಬಲಪಡಿಸುವ 6 ಪ್ರೊಟೀನ್ ಸಮೃದ್ಧ ಹಣ್ಣುಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ