ಚಳಿಗಾಲದಲ್ಲಿ ಕುಂಬಳಕಾಯಿ ಬೀಜ ತಿನ್ನುವುದರ ಪ್ರಯೋಜನಗಳು 

By Reshma
Dec 26, 2024

Hindustan Times
Kannada

ಕುಂಬಳಕಾಯಿ ಬೀಜಗಳು ಪೌಷ್ಟಿಕಾಂಶದ ಆಗರವಾಗಿದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ

ಕುಂಬಳಕಾಯಿ ಬೀಜಗಳಲ್ಲಿ ನಾರಿನಾಂಶ, ಪ್ರೊಟೀನ್‌, ಖನಿಜಗಳು, ಜೀವಸತ್ವಗಳು ಹಾಗೂ ಉತ್ಕರ್ಷಣ ನಿರೋಧಕ ಅಂಶಗಳಿವೆ. ಇದು ಹಲವು ರೋಗಗಳನ್ನು ದೂರ ಇಡಲು ಸಹಕಾರಿ 

ಚಳಿಗಾಲದಲ್ಲಿ ಕುಂಬಳಕಾಯಿ ಬೀಜ ತಿನ್ನುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ 

ಕುಂಬಳಕಾಯಿ ಬೀಜದಲ್ಲಿ ಹೇರಳವಾದ ನಾರಿನಾಂಶವಿದೆ. ಇದು ಹೊಟ್ಟೆಯನ್ನು ಆರೋಗ್ಯವಾಗಿಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಎದುರಾಗುವುದಿಲ್ಲ 

ಕುಂಬಳಕಾಯಿ ಬೀಜಗಳು ಒಮೆಗಾ– 3 ಹಾಗೂ ಒಮೆಗಾ– 6 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ.

ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಬಲವಾಗುತ್ತದೆ. ಚಳಿಗಾಲದಲ್ಲಿ ಇದನ್ನು ತಿನ್ನುವುದರಿಂದ ಶೀತ, ಕೆಮ್ಮು ನಿವಾರಣೆಯಾಗುತ್ತವೆ 

ನೀವು ದೇಹದಲ್ಲಿ ಆಲಸ್ಯ ಮತ್ತು ದೌರ್ಬಲ್ಯ ಅನುಭವಿಸಿದರೆ ಕುಂಬಳಕಾಯಿ ಬೀಜ ತಿನ್ನಿ, ಇದರಿಂದ ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳಬಹುದು 

ಮಧುಮೇಹಿಗಳು ಕುಂಬಳಕಾಯಿ ಬೀಜ ತಿನ್ನುವುದರಿಂದ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ 

ಕುಂಬಳಕಾಯಿ ಬೀಜಗಳಲ್ಲಿ ವಿಟಮಿನ್ ಇ, ಸತು ಹಾಗೂ ಆರೋಗ್ಯಕರ ಕೊಬ್ಬಿನಾಂಶಗಳಿವೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡಿ, ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ 

ಕುಂಬಳಕಾಯಿ ಬೀಜಗಳು ಸಾಕಷ್ಟು ನಾರಿನಾಂಶ ಹೊಂದಿರುವ ಕಾರಣ ಇದನ್ನು ನಿರಂತರವಾಗಿ ಸೇವಿಸುವುದರಿಂದ ತೂಕ ಇಳಿಕೆ ಸಾಧ್ಯತೆ ಇದೆ 

ಈ ಸುದ್ದಿಯು ಸಾಮಾನ್ಯಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ 

ಶ್ರೀಲಂಕಾ ವಿರುದ್ಧ ಭಾರತದ 317 ರನ್‌ ಗೆಲುವಿಗೆ 2 ವರ್ಷ

AFP