30ರ ನಂತರವೂ ಮಹಿಳೆಯರು ಯಂಗ್‌ ಆಗಿ ಕಾಣಲು ತಪ್ಪದೇ ಸೇವಿಸಬೇಕಾದ 10 ಆಹಾರಗಳಿವು  

By Reshma
Mar 27, 2024

Hindustan Times
Kannada

ವಯಸ್ಸು ಮೂವತ್ತಾದ ತಕ್ಷಣ ಹೆಣ್ಣುಮಕ್ಕಳಲ್ಲಿ ಇಲ್ಲದ ಸಮಸ್ಯೆಗಳು ಕಾಡುವುದು ಸಹಜ. ಉತ್ತಮ ಆರೋಗ್ಯಕ್ಕಾಗಿ ಜೀವನಶೈಲಿಯ ಬದಲಾವಣೆಯ ಜೊತೆಗೆ ಈ ಕೆಲವು ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.

30 ನಂತರ ಮಹಿಳೆಯರನ್ನು ಕಾಡುವ ಹಲವು ಸಮಸ್ಯೆಗಳನ್ನು ನಿವಾರಿಸುವ ಗುಣ ಈ ಆಹಾರಗಳಲ್ಲಿದೆ. ಅಂತಹ 10 ಆಹಾರಗಳ ಪಟ್ಟಿ ಇಲ್ಲಿದೆ. 

ಬೆರಿ ಹಣ್ಣುಗಳು: ಸ್ಟ್ರಾಬೆರಿ, ರಾಸ್‌ಬೆರಿ, ಬ್ಲೂಬೆರಿಯಂತಹ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್‌ ಅಂಶ ಸಮೃದ್ಧವಾಗಿದೆ. ಇದು ದೇಹದಲ್ಲಿನ ಉರಿಯೂತ ಹಾಗೂ ಆಕ್ಸಿಡೇಟಿವ್‌ ಒತ್ತಡವನ್ನು ನಿವಾರಿಸುತ್ತದೆ. ಆ ಮೂಲಕ ವಯಸ್ಸಾದ ಲಕ್ಷಣಗಳನ್ನು ತಡೆಯುತ್ತದೆ. 

ಫ್ಯಾಟಿಫಿಶ್‌: ಕೊಬ್ಬಿನಾಮ್ಲ ಅಧಿಕವಿರುವ ಸಾಲ್ಮಾನ್‌ನಂತಹ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಅಧಿಕವಾಗಿದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಇದು ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ತಡೆಯುತ್ತದೆ. 

ಪಾಲಕ್‌ ಸೊಪ್ಪು: ಪಾಲಕ್‌, ಕೇಲ್‌ನಂತಹ ಸೊಪ್ಪಿನಲ್ಲಿ ವಿಟಮಿನ್‌ಗಳು, ಮಿನರಲ್ಸ್‌ಗಳು ಹಾಗೂ ಆಂಟಿಆಕ್ಸಿಡೆಂಟ್‌ ಅಂಶಗಳು ಸಮೃದ್ಧವಾಗಿವೆ. ಇದು ಚರ್ಮದ ಆರೋಗ್ಯದ ಜೊತೆಗೆ ಒಟ್ಟಾರೆ ಯೋಗಕ್ಷೇಮ ಸುಧಾರಿಸಲು ಸಹಾಯ ಮಾಡುತ್ತದೆ.

ಒಣಹಣ್ಣುಗಳು: ಬಾದಾಮಿ, ವಾಲ್‌ನಟ್‌, ಅಗಸೆಬೀಜ, ಚೀಯಾ ಬೀಜದಂತಹ ಒಣಹಣ್ಣು ಹಾಗೂ ಬೀಜಗಳಲ್ಲಿ ನಾರಿನಾಂಶ, ಆಂಟಿಆಕ್ಸಿಡೆಂಟ್‌ ಅಂಶ ಹೇರಳವಾಗಿದ್ದು ಇದು ಹೃದಯ ಆರೋಗ್ಯ ಹಾಗೂ ಚರ್ಮದ ಆರೋಗ್ಯಕ್ಕೆ ಉತ್ತಮ. 

ಮೊಸರು: ಪ್ರೊಬಯೋಟಿಕ್‌ ಅಂಶವಿರುವ ಮೊಸರು ಕರುಳಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಪೋಷಕಾಂಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ. 

ಅರಿಸಿನ: ಇದರಲ್ಲಿರುವ ಕರ್ಕ್ಯುಮಿನ್‌ ಎಂಬ ಸಂಯಕ್ತ ಉರಿಯೂತ ನಿವಾರಿಸುವ ಜೊತೆಗೆ ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ನಿವಾರಿಸುತ್ತದೆ. 

ಗ್ರೀನ್‌ ಟೀ: ಕ್ಯಾಟೆಚಿನ್‌ ಹಾಗೂ ಆಂಟಿಆಕ್ಸಿಡೆಂಟ್‌ ಅಂಶದಿಂದ ಕೂಡಿರುವ ಗ್ರೀನ್‌ ಟೀ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಚರ್ಮದ ಆರೋಗ್ಯಕ್ಕೂ ಉತ್ತಮ. 

ಟೊಮೆಟೊ: ಲೈಕೋಪಿನ್‌ ಎಂಬ ಆಂಟಿಆಕ್ಸಿಡೆಂಟ್‌ ಹೊಂದಿರುವ ಟೊಮೆಟೊ ಹಣ್ಣು ಚರ್ಮದ ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ಇದು ಸೂರ್ಯನ ಕಿರಣಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. 

ಅವಕಾಡೊ: ಆರೋಗ್ಯಕರ ಕೊಬ್ಬಿನಾಂಶ ಹೊಂದಿರುವ ಅವಕಾಡೊ ವಿಟಮಿನ್‌ ಇಯಿಂದ ಸಮೃದ್ಧವಾಗಿದೆ. 

ಡಾರ್ಕ್‌ ಚಾಕೊಲೇಟ್‌: ಇದರಲ್ಲಿ ಕೋಕಾ ಅಂಶದೊಂದಿಗೆ ಆಂಟಿಆಕ್ಸಿಡೆಂಟ್‌ ಅಂಶ ಹೇರಳವಾಗಿರುತ್ತದೆ. ಇದು ಹೃದಯದ ಆರೋಗ್ಯಕ್ಕೂ ಉತ್ತಮ. 

ಬೇಸಿಗೆ ದಾಹ ತಣಿಸುವ 7 ಸ್ಪೆಷಲ್ ಲಸ್ಸಿಗಳು