ಮುಗುಳ್ನಗು ಕೂಡ ಒಂದು ವ್ಯಾಯಾಮ, ನಗುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಪ್ರಯೋಜನ  

By Reshma
Aug 16, 2024

Hindustan Times
Kannada

ನಗು ಕೂಡ ಒಂದು ಯೋಗಾಸನ. ಏಕೆಂದರೆ ನಗುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ನಗು ಎಂಡಾರ್ಫಿನ್‌ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಮನಸ್ಥಿತಿ ಸುಧಾರಿಸುವ ಒತ್ತಡ ನಿವಾರಕ ರಾಸಾಯನಿಕವಾಗಿದೆ 

ನಗು ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಕ್ಯಾಲೊರಿ ಕಡಿಮೆ ಮಾಡುತ್ತದೆ. ಆ ಕಾರಣದಿಂದ ವ್ಯಾಯಾಮದ ಪ್ರಯೋಜನಗಳು ನಗುವಿನಿಂದ ಬರುತ್ತದೆ.

ನಗು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ 

ನಗು ಸಾಮಾಜಿಕ ಬಂಧಗಳು ಮತ್ತು ಸ್ನೇಹವನ್ನು ಬಲಪಡಿಸುತ್ತದೆ 

ನಗು ರಕ್ತಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ 

ನಗುವುದು ಸಾಮಾನ್ಯವಾಗಿ ದೇಹದಲ್ಲಿ ಪ್ರತಿಕಾಯಗಳನ್ನು ಹೆಚ್ಚಿಸುತ್ತದೆ ಹಾಗೂ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ 

ನಗುವುದರಿಂದ ದೇಹವು ನೈಸರ್ಗಿಕವಾಗಿ ನೋವು ನಿವಾರಕಗಳನ್ನು ಉತ್ಪಾದಿಸುತ್ತದೆ ಮತ್ತು ನೋವನ್ನು ನಿವಾರಿಸುತ್ತದೆ 

ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI