ಶುಭಫಲಕ್ಕಾಗಿ ಶನಿ ಅಮಾವಾಸ್ಯೆಯಂದು ಅನುಸರಿಸಬೇಕಾದ 5 ನಿಯಮಗಳಿವು
By Priyanka Gowda Mar 18, 2025
Hindustan Times Kannada
ವರ್ಷದ ಮೊದಲ ಶನಿ ಅಮಾವಾಸ್ಯೆ ಮಾರ್ಚ್ 29, 2025 ರಂದು ಬರುತ್ತದೆ. ಯಾವುದೇ ತಿಂಗಳ ಅಮಾವಾಸ್ಯೆ ಶನಿವಾರ ಬಂದರೆ, ಅದನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
ಹಿಂದೂ ಧರ್ಮದಲ್ಲಿ ಶನಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಈ ದಿನದಂದು ಶನಿದೇವನನ್ನು ಮೆಚ್ಚಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
UNSPLASH
ಶನಿ ಅಮಾವಾಸ್ಯೆಗೆ ಪರಿಹಾರಗಳು: ಶನಿ ಅಮಾವಾಸ್ಯೆಯ ದಿನದಂದು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಶನಿ ಅಮಾವಾಸ್ಯೆಯಂದು ಅರಳಿ ಮರವನ್ನು ಪೂಜಿಸಿ ಮತ್ತು ‘ಓಂ ಶಂ ಶನೈಶ್ಚರಾಯ ನಮಃ’ ಎಂಬ ಮಂತ್ರವನ್ನು ಪಠಿಸುತ್ತಾ ಅದರ ಸುತ್ತಲೂ ಪ್ರದಕ್ಷಿಣೆ ಹಾಕಿ. ಇದಾದ ನಂತರ, ಶನಿದೇವನ ಆಶೀರ್ವಾದ ಪಡೆಯಲು ಪ್ರಾರ್ಥಿಸಿ.
ಮನೆಯ ಬಾಗಿಲಿನ ಮೇಲೆ ಕಪ್ಪು ಬಣ್ಣದ ಕುದುರೆ ಲಾಳವನ್ನು ಸ್ಥಾಪಿಸಿ. ಅದರ ಬಾಯಿಯನ್ನು ಮೇಲಕ್ಕೆ ತೆರೆದಿಡಿ. ಹೀಗೆ ಮಾಡುವುದರಿಂದ ಕಷ್ಟ ದೂರವಾಗಿ ಶನಿ ದೇವರ ಆಶೀರ್ವಾದ ಪಡೆಯಬಹುದು.
ಅಂಗಡಿ ಅಥವಾ ಕಚೇರಿಯ ಪ್ರವೇಶದ್ವಾರದಲ್ಲಿ ಕಪ್ಪು ಕುದುರೆ ಲಾಳವನ್ನು ಇಡುತ್ತಿದ್ದರೆ, ಅದರ ತೆರೆದ ಬಾಯಿಯನ್ನು ಕೆಳಮುಖವಾಗಿ ಇರಿಸಿ.
ಶನಿ ಅಮಾವಾಸ್ಯೆಯ ವಿಶೇಷ ಸಂದರ್ಭಜಲ್ಲಿ, ಶನಿ ಸ್ತ್ರೋತ್ರವನ್ನು ಪಠಿಸುವುದರಿಂದ ಶನಿಯು ಪ್ರಸನ್ನನಾಗುತ್ತಾನೆ. ಸಾಧ್ಯವಾದರೆ, ಶನಿ ಸ್ತೋತ್ರವನ್ನು 7 ಬಾರಿ ಪಠಿಸಿ.
ಶನಿ ದೇವರ ದುಷ್ಪರಿಣಾಮಗಳನ್ನು ತಪ್ಪಿಸಲು ಬಯಸಿದರೆ, ಶನಿ ಅಮಾವಾಸ್ಯೆಯ ದಿನದಂದು ಹನುಮಂತನನ್ನು ಪೂಜಿಸಿ ಮತ್ತು ಹನುಮಾನ್ ಚಾಲೀಸ್ ಪಠಿಸಿ.
ಪ್ರಾಣಿ-ಪಕ್ಷಿಗಳು ಅಥವಾ ಮೀನುಗಳಿಗೆ ಆಹಾರ, ನೀರು ಮತ್ತು ಮೇವನ್ನು ನೀಡುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ.
ಗಮನಿಸಿ: ಈ ಮಾಹಿತಿಯು ನಂಬಿಕೆಗಳು, ಧಾರ್ಮಿಕ ಗ್ರಂಥಗಳು ಮತ್ತು ವಿವಿಧ ಮಾಧ್ಯಮಗಳ ಮಾಹಿತಿಯನ್ನು ಆಧರಿಸಿದೆ. ಯಾವುದೇ ಮಾಹಿತಿಯನ್ನು ನಂಬುವ ಮೊದಲು ತಜ್ಞರನ್ನು ಸಂಪರ್ಕಿಸಿ.