Hero XPulse 210 & Xtreme 250R: ಹೀರೋ ಬೈಕುಗಳ ಬುಕಿಂಗ್ ಆರಂಭ
By Kiran Kumar I G
Mar 27, 2025
Hindustan Times
Kannada
ಹೀರೋ ಮೋಟೊಕಾರ್ಪ್ ಕಂಪನಿಯು 2025ರ ಆಟೋ ಎಕ್ಸ್ ಪೋದಲ್ಲಿ ಎಕ್ಸ್ ಪಲ್ಸ್ 210 ಮತ್ತು ಎಕ್ಸ್ ಟ್ರೀಮ್ 250ಆರ್ ಬೈಕುಗಳನ್ನು ಬಿಡುಗಡೆಗೊಳಿಸಿತ್ತು.
ಎರಡೂ ಬೈಕುಗಳನ್ನು ಹೀರೋ ಕಂಪನಿಯ ಹೊಸ ಪ್ರೀಮಿಯಾ ಡೀಲರ್‌ಶಿಪ್ ಮೂಲಕ ಮಾರಾಟ ಮಾಡಲಿದ್ದು, ರೂ.10,000 ಟೋಕನ್ ಮೊತ್ತಕ್ಕೆ ಬುಕ್ ಮಾಡಬಹುದು.
ಹೀರೋ ಎಕ್ಸ್ ಪಲ್ಸ್ 200 4ವಿ ಮಾಲೀಕರು ಎಕ್ಸ್ ಪಲ್ಸ್ 210 ಬೈಕ್ ಅನ್ನು ರೂ.7,000 ಪಾವತಿಸಿ ಬುಕ್ ಮಾಡಬಹುದು.
ಹೀರೋ ಎಕ್ಸ್ ಪಲ್ಸ್ 210 ಬೈಕ್ ಹೊಸ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ ಮತ್ತು ಹೊಸ ಮತ್ತು ಹೆಚ್ಚು ಶಕ್ತಿಶಾಲಿ 210 ಸಿಸಿ ಲಿಕ್ವಿಡ್-ಕೂಲ್ಡ್ ಮೋಟರ್ ಅನ್ನು ಪಡೆಯುತ್ತದೆ.
ಇದು ನೂತನ ವಿನ್ಯಾಸ, ಉತ್ತಮ ಎರ್ಗೊನಾಮಿಕ್ಸ್, ಬದಲಾಯಿಸಬಹುದಾದ ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ TFT ಪರದೆಯನ್ನು ಹೊಂದಿದೆ.
ಹೀರೋ ಎಕ್ಸ್ ಟ್ರೀಮ್ 250ಆರ್ ಬ್ರ್ಯಾಂಡ್ ನ ಮೊದಲ 250 ಸಿಸಿ ಕೊಡುಗೆಯಾಗಿದ್ದು, ಎಕ್ಸ್ ಟಂಟ್ 2.5 ಆರ್ ಕಾನ್ಸೆಪ್ಟ್ ಅನ್ನು ಆಧರಿಸಿದೆ.
ಎಕ್ಸ್ ಟ್ರೀಮ್ 250ಆರ್ ಸ್ಟೈಲಿಶ್ ಮತ್ತು ವೈಶಿಷ್ಟ್ಯಗಳಿಂದ ಸಮೃದ್ಧವಾಗಿದೆ ಮತ್ತು ಎಲ್ಇಡಿ ಲೈಟಿಂಗ್, ನ್ಯಾವಿಗೇಷನ್, ಕರೆ ಮತ್ತು ಎಸ್ಎಂಎಸ್ ಅಲರ್ಟ್, ಡಿಜಿಟಲ್ ಕನ್ಸೋಲ್ ಹೊಂದಿದೆ.
ಎಕ್ಸ್ ಟ್ರೀಮ್ 250ಆರ್ ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ 29.58 ಬಿಹೆಚ್ ಪಿ ಮತ್ತು 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಹೀರೋ ಎಕ್ಸ್ ಪಲ್ಸ್ 210 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.75 ಲಕ್ಷದಿಂದ ರೂ.1.86 ಲಕ್ಷಗಳಾದರೆ, ಎಕ್ಸ್ ಟ್ರೀಮ್ 250ಆರ್ ಬೈಕಿನ ಬೆಲೆಯು ರೂ.1.80 ಲಕ್ಷಗಳಾಗಿದೆ.
ಹೀರೋ ಎಕ್ಸ್‌ಪಲ್ಸ್ 210 ಮತ್ತು ಎಕ್ಸ್‌ಟ್ರೀಮ್ 250ಆರ್ ಬೈಕುಗಳ ಬುಕಿಂಗ್ ಆರಂಭವಾಗಿದೆ.
ಐಪಿಎಲ್ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ