ಕೃಷ್ಣ ಜನ್ಮಾಷ್ಠಮಿಯನ್ನು ಪ್ರತಿ ವರ್ಷ ಕೃಷ್ಣನ ಹುಟ್ಟುಹಬ್ಬವೆಂದು ಆಚರಿಸಲಾಗುತ್ತದೆ
ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯನ್ನು ಶ್ರೀಕೃಷ್ಣ ಜನ್ಮಾಷ್ಠಮಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ
ಈ ದಿನ ಭಕ್ತರು ಕೃಷ್ಣನನ್ನು ಮಗುವಿನ ರೂಪದಲ್ಲೂ ಪೂಜಿಸುತ್ತಾರೆ
ಈ ಬಾರಿ ಕೃಷ್ಣ ಜನ್ಮಾಷ್ಠಮಿ ಹಬ್ಬವನ್ನು ಆಗಸ್ಟ್ 26 ಸೋಮವಾರ ಆಚರಿಸುತ್ತಾರೆ
ಪಂಚಾಂಗ ಪ್ರಕಾರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ, ಆ 26 ರಂದು ಬೆಳಗ್ಗೆ 3:41ಕ್ಕೆ ಪ್ರಾರಂಭವಾಗಲಿದ್ದು ಆ 27 ಬೆಳಗ್ಗೆ 2:21ವರೆಗೆ ಮುಂದುವರೆಯುತ್ತದೆ
ಜನ್ಮಾಷ್ಠಮಿಯಂದು ಕೃಷ್ಣ ಪೂಜೆಯ ಶುಭ ಮುಹೂರ್ತವು ಆಗಸ್ಟ್ 26ರ ಮಧ್ಯರಾತ್ರಿ 12 ರಿಂದ 12:44 ವರೆಗೆ ಇರುತ್ತದೆ
ಜನ್ಮಾಷ್ಠಮಿಯಂದು ರಾತ್ರಿ ಪೂಜೆಗೆ ವಿಶೇಷ ಮಹತ್ವವಿದೆ, ಶ್ರೀ ಕೃಷ್ಣನು ಮಧ್ಯರಾತ್ರಿ ಜನಿಸಿದನು. ಆದ್ದರಿಂದಲೇ ಭಕ್ತರು ಮಧ್ಯರಾತ್ರಿ ಹೆಚ್ಚಾಗಿ ಕೃಷ್ಣನನ್ನು ಪೂಜಿಸುತ್ತಾರೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.