ಗಂಗಾ ಸ್ನಾನ ಮಾಡುವಾಗ ಈ 5 ಕೆಲಸ ಅಪ್ಪಿತಪ್ಪಿಯೂ ಮಾಡಬೇಡಿ

By Jayaraj
May 11, 2024

Hindustan Times
Kannada

ಸನಾತನ ಧರ್ಮದಲ್ಲಿ ನದಿಗಳನ್ನು ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಗಂಗಾ ಮಾತೆಗೆ ವಿಶೇಷ ಸ್ಥಾನವಿದೆ.

ಜನರ ನಂಬಿಕೆಯ ಪ್ರಕಾರ, ಗಂಗಾ ಸ್ನಾನವು ಮಾಡಿದ ಪಾಪಗಳನ್ನು ಪರಿಹರಿಸುತ್ತದೆ ಎಂಬ ನಂಬಿಕೆ. ಹೀಗಾಗಿ ವಿಶೇಷ ದಿನಗಳಂದು ಗಂಗಾ ಸ್ನಾನಕ್ಕಾಗಿ ಭಕ್ತರ ದಂಡೇ ಇರುತ್ತದೆ.

ಗಂಗೆಯಲ್ಲಿ ಸ್ನಾನ ಮಾಡುವುದರಿಂದ ದೈಹಿಕ ಮಾತ್ರವಲ್ಲದೆ ಮಾನಸಿಕ ನೋವು ಮಾಯವಾಗುತ್ತದೆ ಎಂದು ನಂಬಲಾಗಿದೆ.

ಗಂಗಾಸ್ನಾನ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು.

ಗಂಗೆಯಲ್ಲಿ ಸ್ನಾನ ಮಾಡುವ ಮೊದಲು ಗಂಗಾಮಾತೆಗೆ ನಮಸ್ಕರಿಸಬೇಕೆಂಬುದು ನಂಬಿಕೆ.

ಗಂಗೆಯಲ್ಲಿ ಸ್ನಾನ ಮಾಡುವಾಗ ದೇಹದ ಕೊಳೆಯನ್ನು ನದಿಯಲ್ಲಿ ತೊಳೆಯಬಾರದು. ಇದೇ ವೇಳೆ ಸೋಪ್ ಹಾಗೂ ಶಾಂಪೂ ಕೂಡಾ ಬಳಸಬಾರದು.

ಗಂಗಾ ಸ್ನಾನದ ನಂತರ ದೇಹದಲ್ಲಿರುವ ನೀರನ್ನು ಒರೆಸಬಾರದು.

ಗಂಗೆಯಲ್ಲಿ ಮೂತ್ರವಿಸರ್ಜನೆ ಮಾಡಬಾರದು. ಹಾಗೂ ಮಲವನ್ನು ಎಸೆಯಬಾರದು.

ಗಂಗೆಯಲ್ಲಿ ಬಟ್ಟೆ ಒಗೆಯುವುದು ಕೂಡಾ ಪಾಪವೆಂದು ಪರಿಗಣಿಸಲಾಗುತ್ತದೆ.

ಗಂಗಾನದಿಯಲ್ಲಿ ಕಸ ಮಾತ್ರವಲ್ಲದೆ ಹೂವು ಹಾರಗಳನ್ನು ಕೂಡಾ ಎಸೆಯಬಾರದು.

ಈ ಮಾಹಿತಿಯು ಧಾರ್ಮಿಕ ನಂಬಿಕೆ ಹಾಗೂ ವಿವಿಧ ಮಾಧ್ಯಮಗಳನ್ನು ಆಧರಿಸಿದೆ.

ಸೀರೆಯಲ್ಲಿ ಪುಟ್ಟ ಗೌರಿ ಮದುವೆ ನಟಿ ಸಾನ್ಯಾ ಅಯ್ಯರ್‌ ಸಖತ್‌ ಕ್ಯೂಟ್‌