ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಪ್ರತಿ ತಿಂಗಳಲ್ಲಿ 2 ಏಕಾದಶಿಗಳಿವೆ. ಇದರ ಪ್ರಕಾರ ವರ್ಷದಲ್ಲಿ ಒಟ್ಟು 24 ಏಕಾದಶಿಗಳು ಬರುತ್ತವೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಕಾಮದ ಏಕಾದಶಿಯು ವರ್ಷದ ಮೊದಲ ಏಕಾದಶಿ ಆಗಿದೆ. ಇದನ್ನು ಫಲದ ಏಕಾದಶಿ ಎಂದೂ ಕರೆಯುತ್ತಾರೆ.
ಚೈತ್ರ ಮಾಸದ ಶುಕ್ಲಪಕ್ಷದ ಏಕಾದಶಿಯಂದು ಕಾಮದ ಏಕಾದಶಿಯನ್ನು ಆಚರಿಸಲಾಗುತ್ತದೆ. ಇದರ ಪ್ರಕಾರ ಈ ಬಾರಿ ಏಪ್ರಿಲ್ 19ಕ್ಕೆ ಕಾಮದ ಏಕಾದಶಿ ಇದೆ
ಸಾಮಾನ್ಯವಾಗಿ ಏಕಾದಶಿಯಂದು ವಿಷ್ಣುವನ್ನು ಪೂಜಿಸಲಾಗುತ್ತದೆ
ಕಾಮದ ಏಕಾದಶಿಯಂದು ಬ್ರಹ್ಮ ಮುಹೂರ್ತದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಉಪವಾಸ ಸಂಕಲ್ಪ ಮಾಡಿ ವಿಷ್ಣುವನ್ನು ಆರಾಧಿಸಬೇಕು
ಏಕಾದಶಿಯಂದು ಉಪವಾಸವಿದ್ದು ಪೂಜೆ ಮುಗಿಸಿ ಮರುದಿನ, ಅಂದರೆ ದ್ವಾದಶಿಯಂದು ಮತ್ತೆ ಪೂಜೆ ಮಾಡಿ ಉಪವಾಸವನ್ನು ಮುರಿಯಬೇಕು
ಏಕಾದಶಿ ಮರುದಿನ, ಬ್ರಾಹ್ಮಣರನ್ನು ಮನೆಗೆ ಕರೆದು ಸತ್ಕರಿಸಿ ದಾನ ಕೊಟ್ಟು ಬೀಳ್ಕೊಟ್ಟ ನಂತರವಷ್ಟೇ ಊಟ ಮಾಡಬೇಕು
ಏಕಾದಶಿಯಂದು ವಿಷ್ಣು ಸಹಸ್ರನಾಮ ಪಾರಾಯಣ ಸೇರಿದಂತೆ ಭಜನೆಗೆ ಆದ್ಯತೆ ನೀಡಬೇಕು, ಧ್ಯಾನ ದಾನ ಮಾಡಬೇಕು
ಭಗವಾನ್ ವಿಷ್ಣುವಿಗೆ ಇಷ್ಟವಾದ ಹೂ, ಹಣ್ಣುಗಳು ನೈವೇದ್ಯವನ್ನಿಟ್ಟು ಪೂಜೆ ಮಾಡಬೇಕು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.