ವರುತಿನಿ ಏಕಾದಶಿಯಂದು ಈ ಕೆಲಸಗಳನ್ನು ಮಾಡಿ ಪಾಪದಿಂದ ವಿಮುಕ್ತಿ ಹೊಂದಿ
By Rakshitha Sowmya Apr 29, 2024
Hindustan Times Kannada
ಹಿಂದೂ ಧರ್ಮದಲ್ಲಿ ಏಕಾದಶಿಗೆ ಬಹಳ ಮಹತ್ವದ ಸ್ಥಾನವಿದೆ. ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ವರುತಿನಿ ಏಕಾದಶಿ ಎಂದು ಕರೆಯುತ್ತಾರೆ
ವೈಶಾಖ ಮಾಸದ ಕೃಷ್ಣಪಕ್ಷದ ಏಕಾದಶಿ ದಿನಾಂಕ ಮೇ 3 ರಂದು ರಾತ್ರಿ 11.24ಕ್ಕೆ ಆರಂಭವಾಗಲಿದೆ
ಮರುದಿನ, ಅಂದರೆ ಮೇ 4 ರಂದು ರಾತ್ರಿ 8:38ಕ್ಕೆ ಮುಹೂರ್ತ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ಮೇ 4 ರಂದು ವರುತಿನಿ ಏಕಾದಶಿ ಆಚರಿಸಲಾಗುತ್ತದೆ
ಏಕಾದಶಿಯಂದು ಈ ಕೆಲಸಗಳನ್ನು ಮಾಡಿದರೆ ನಿಮಗೆ ಶುಭ ಫಲಗಳು ದೊರೆಯಲಿವೆ
ಏಕಾದಶಿಯಂದು ಭಗವಾನ್ ವಿಷ್ಣುವನ್ನು ಆರಾಧಿಸಲಾಗುತ್ತದೆ. ಏಕಾದಶಿ ಹಿಂದಿನ ದಿನ ಶುದ್ಧ ಆಹಾರವನ್ನು ಸೇವಿಸಬೇಕು, ಮಾಂಸಾಹಾರವನ್ನು ತ್ಯಜಿಸಬೇಕು.
ಮರುದಿನ, ಅಂದರೆ ವರುತಿನಿ ಏಕಾದಶಿ ದಿನ ಬೆಳಗ್ಗೆ ಬೇಗ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಸ್ನಾನ ಮಾಡಿ ದೇವರ ಪ್ರಾರ್ಥನೆ ಮಾಡಬೇಕು
ಈ ದಿನ ಹರಿಯುವ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದು, ಆದ್ದರಿಂದ ಮನೆ ಸಮೀಪದಲ್ಲಿ ಯಾವುದಾದರೂ ನದಿ ಇದ್ದರೆ ಸ್ನಾನ ಮಾಡಲು ಪ್ರಯತ್ನಿಸಿ
ಏಕಾದಶಿ ದಿನ ಬ್ರಾಹ್ಮಣರಿಗೆ ದಾನ ಮಾಡಬೇಕು, ಅಶಕ್ತರಿಗೆ ಕೂಡಾ ನಿಮ್ಮ ಕೈಲಾದ ಸಹಾಯ ಮಾಡಬಹುದು
ಏಕಾದಶಿಯಂದು ಅನ್ನ ಅಥವಾ ಅಕ್ಕಿಯಿಂದ ಮಾಡಿದ ಯಾವುದೇ ಆಹಾರಗಳನ್ನು ಸೇವಿಸಬಾರದು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.