ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ಇರುವುದು ಶುಭವೇ?
By Rakshitha Sowmya May 06, 2024
Hindustan Times Kannada
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿ ಹಿಂದೂಗಳ ಮನೆಯಲ್ಲೂ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ
ತುಳಸಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಿರುತ್ತದೆ
ತುಳಸಿಯಲ್ಲಿ ಲಕ್ಷ್ಮಿ ನೆಲೆಸಿದ್ದು , ಅದನ್ನು ಪೂಜಿಸುವುದರಿಂದ ವಿಷ್ಣುವಿನ ಆಶೀರ್ವಾದ ಕೂಡಾ ದೊರೆಯುತ್ತದೆ
ತುಳಸಿಗಿಡವನ್ನು ಮನೆಯಲ್ಲಿ ನೆಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು
ಬಹಳಷ್ಟು ಜನರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಟ್ಟಿರುತ್ತಾರೆ, ಹೀಗಿರುವಾಗ ಕೆಲವೊಂದು ವಿಚಾರಗಳನ್ನು ನೀವು ನೆನಪಿನಲ್ಲಿ ಇಡಬೇಕು
ನೀವು ಒಂದಕ್ಕಿಂದ ಹೆಚ್ಚು ತುಳಸಿಯನ್ನು ನೆಡಬೇಕು ಎಂದಾದರೆ 3, 5, 7ರ ಸಂಖ್ಯೆಯಲ್ಲಿ ನೆಡಬೇಕು
ತುಳಸಿಗಿಡವನ್ನು ನಿಮ್ಮ ಮನೆಯ ಅಂಗಳ ಅಥವಾ ತಾರಸಿಯಲ್ಲಿ ನೆಡಬಹುದು
ತುಳಸಿಗಿಡವನ್ನು ನಿಮ್ಮ ಮನೆಯ ಪೂರ್ವ, ಈಶಾನ್ಯ ದಿಕ್ಕಿನಲ್ಲಿ ಮಾತ್ರ ನೆಡಬೇಕು, ಹೀಗೆ ಮಾಡಿದರೆ ನಿಮ್ಮ ಮನೆ ಸಂಪತ್ತಿನಿಂದ ತುಂಬಿರುತ್ತದೆ
ತುಳಸಿಯ ಸುತ್ತ ಯಾವಾಗಲೂ ಸ್ವಚ್ಛವಾಗಿಡಬೇಕು, ಸುತ್ತ ಮುತ್ತ ಶೂ, ಪೊರಕೆ, ಹಳೆಬಟ್ಟೆಗಳು ಸೇರಿದಂತೆ ಇತರ ವಸ್ತುಗಳನ್ನು ಇಡಬಾರದು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ