ಮೇ ತಿಂಗಳ ಈ 5 ದಿನಗಳು ಯಾವುದೇ ಶುಭ ಕಾರ್ಯ ಮಾಡಬೇಡಿ

By Rakshitha Sowmya
Apr 30, 2024

Hindustan Times
Kannada

ಹಿಂದೂ ಧರ್ಮದ ಪ್ರಕಾರ ಪ್ರತಿ ತಿಂಗಳಲ್ಲಿ 5 ದಿನಗಳನ್ನು ಅಶುಭ ಎಂದು ಪರಿಗಣಿಸಲಾಗಿದೆ, ಈ ದಿನಗಳು ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ

ಇದನ್ನು ಪಂಚಕ ಎಂದೂ ಕರೆಯುತ್ತಾರೆ, ಮೇ ತಿಂಗಳ ಆ 5 ದಿನಗಳು ಯಾವುವು ನೋಡೋಣ

ಮೇ 5 ರಂದು ಶುಭ ಸಮಾರಂಭ ಮಾಡುವಂತಿಲ್ಲ, ಆದರೆ ಈ ಪಂಚಕದ ದಿನ ಪೂಜೆಗೆ ಅವಕಾಶವಿದೆ. 

 ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇ ತಿಂಗಳ ಪಂಚಕವು ಮೇ 2 ಮಧ್ಯಾಹ್ನ 2:58ರಿಂದ ಆರಂಭವಾಗಲಿದೆ, ಇದು ಮೇ 6ವರೆಗೂ ಇರುತ್ತದೆ

ಈ ಬಾರಿ ಅಗ್ನಿ ಪಂಚಕವಿದ್ದು ಈ ದಿನಗಳಲ್ಲಿ ಯಾವುದೇ ಶುಭ ಕಾರ್ಯ ಮಾಡಲು ಯೋಜಿಸಿದ್ದರೆ ಅದನ್ನು ಮುಂದೂಡಿ

ಈ ಪಂಚಕದಲ್ಲಿ ಅಗ್ನಿ ಪ್ರಮಾದ ಆಗುವ ಸಂಭವ ಉಂಟು, ಆದ್ದರಿಂದ ಬಹಳ ಎಚ್ಚರಿಕೆಯಿಂದಿರಿ. 

ಪಂಚಕದ ದಿನದಂದು ಮನೆ, ಕಚೇರಿ ಸೇರಿದಂತೆ ಯಾವುದೇ ಕಟ್ಟಡ ನಿರ್ಮಾಣ ಕೆಲಸಕ್ಕೆ ಕೈ ಹಾಕಬಾರದು

ಪಂಚಕದ ದಿನ ಹೊಸ ಮಂಚಗಳನ್ನು ತಯಾರಿಸಬಾರದು, ಮನೆಗೆ ಕೂಡಾ ತರಬಾರದು

ಪಂಚಕದ ದಿನ ವಿಶೇಷವಾಗಿ ದಕ್ಷಿಣ ದಿಕ್ಕಿಗೆ ಪ್ರಯಾಣಿಸುವುದನ್ನು ತಪ್ಪಿಸಿ, ಮಗಳು-ಸೊಸೆಯನ್ನು ಹೊರಗೆ ಕಳಿಸಬಾರದು

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna