ಯಾವ ದೇವರಿಗೆ ಯಾವ ಹೂವನ್ನು ಅರ್ಪಿಸಬೇಕು?

By HT Kannada Desk
Jul 08, 2024

Hindustan Times
Kannada

ಹಿಂದೂ ಧರ್ಮದಲ್ಲಿ ಪೂಜೆಗೆ ಬಹಳ ನಿಯಮಗಳಿವೆ

ಪ್ರತಿದಿನವೂ ಒಂದೊಂದು ದೇವರಿಗೆ ಮೀಸಲಿಡಲಾಗಿದೆ, ಅದೇ ರೀತಿ ಒಂದೊಂದು ದೇವರಿಗೂ ಒಂದೊಂದು ರೀತಿಯ ಹೂ ಅರ್ಪಿಸಲಾಗುವುದು

ಯಾವ ದೇವರಿಗೆ ಯಾವ ಹೂವನ್ನು ಅರ್ಪಿಸಿದರೆ ಶುಭ, ಮುಂದೆ ಗಮನಿಸಿ

ಲಕ್ಷ್ಮೀಗೆ ಕಮಲ, ಗುಲಾಬಿ ಹೂಗಳನ್ನು ಅರ್ಪಿಸಬಹುದು. ಜೊತೆಗೆ ಸೇವಂತಿಗೆಯಂಥ ಹಳದಿ ಹೂಗಳನ್ನು ಕೂಡಾ ಹಾಕಬಹುದು

ವಿಷ್ಣುವಿಗೆ ತುಳಸಿ, ಮಲ್ಲಿಗೆ, ಕಮಲ, ಸೇವಂತಿಗೆ ಹೂಗಳನ್ನು ಅರ್ಪಿಸಬಹುದು

ದುರ್ಗೆಗೆ ದಾಸವಾಳ, ಕೆಂಪು ಗುಲಾಬಿ, ಬಿಳಿ ಕಮಲ ಅಥವಾ ಗುಲಾಬಿ ಹೂಗಳನ್ನು ಅರ್ಪಿಸಬಹುದು

ಸರಸ್ವತಿಗೆ ಬಿಳಿ ದಾಸವಾಳ ಸೇರಿದಂತೆ ಯಾವುದೇ ಶ್ವೇತವರ್ಣದ ಹೂಗಳನ್ನು ಅರ್ಪಿಸಬಹುದು, ಹಳದಿ ಹೂ ಕೂಡಾ ಹಾಕಬಹುದು

ಸರಸ್ವತಿಗೆ ಬಿಳಿ ದಾಸವಾಳ ಸೇರಿದಂತೆ ಯಾವುದೇ ಶ್ವೇತವರ್ಣದ ಹೂಗಳನ್ನು ಅರ್ಪಿಸಬಹುದು, ಹಳದಿ ಹೂ ಕೂಡಾ ಹಾಕಬಹುದು

ಶಿವನಿಗೆ ಪಾರಿಜಾತ ಹಾಗೂ ಬಿಲ್ವಪತ್ರೆ ಎಂದರೆ ಬಹಳ ಇಷ್ಟವಾಗುತ್ತದೆ

ಹನುಮನಿಗೆ ಕೆಂಪು ಗುಲಾಬಿ ಅಥವಾ ಕೆಂಪು ದಾಸವಾಳ ಅರ್ಪಿಸಬಹುದು, ಜೊತೆಗೆ ವೀಳ್ಯದೆಲೆ ಹಾರ ಎಂದರೆ ಹನುಮನಿಗೆ ಬಹಳ ಇಷ್ಟ

ವಿಘ್ನ ನಿವಾರಕನಿಗೆ ದಾಸವಾಳ, ಮಲ್ಲಿಗೆ ಅಥವಾ ಪಾರಿಜಾತ ಹೂಗಳೆಂದರೆ ಬಹಳ ಇಷ್ಟ

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ