ಹಿಂದೂ ಧರ್ಮದಲ್ಲಿ ಅನೇಕ ಸಂಪ್ರದಾಯ, ನಂಬಿಕೆಗಳನ್ನು ಆಚರಿಸಲಾಗುತ್ತದೆ
ಸಂಜೆಯ ನಂತರ ಹೂ, ಎಲೆಗಳನ್ನು ಕೀಳಬಾರದು ಎಂಬ ನಂಬಿಕೆ ಹಲವರಲ್ಲಿ ಮನೆ ಮಾಡಿದೆ
ಮರಗಿಡಗಳಿಗೂ ಜೀವ ಇದೆ, ಸಂಜೆ ಸೂರ್ಯಾಸ್ತದ ನಂತರ ಅವು ವಿಶ್ರಾಂತಿ ಪಡೆಯುತ್ತವೆ, ಆದ್ದರಿಂದ ಅವುಗಳನ್ನು ಸ್ಪರ್ಶಿಸಬಾರದು ಎಂಬ ಧಾರ್ಮಿಕ ನಂಬಿಕೆ ಇದೆ
ಯಾರಾದರೂ ಮಲಗಿರುವಾಗ, ವಿಶ್ರಾಂತಿ ಪಡೆಯುವಾಗ ಅವರಿಗೆ ತೊಂದರೆ ನೀಡಬಾರದು ಎಂದು ನಂಬಲಾಗಿದೆ, ಅದೇ ರೀತಿ ಹೂ, ಸಸ್ಯಗಳನ್ನು ಕೂಡಾ ಸಂಜೆ ನಂತರ ಮುಟ್ಟಬಾರದು
ಮರ,ಗಿಡಗಳಲ್ಲಿ ಕೀಟಗಳು, ಪಕ್ಷಿಗಳು ವಾಸಿಸುತ್ತವೆ, ಒಂದು ವೇಳೆ ನಾವು ಅವುಗಳ ವಿಶ್ರಾಂತಿಗೆ ಭಂಗ ತರಬಾರದು ಎನ್ನುವುದು ಮತ್ತೊಂದು ಕಾರಣ
ಪೂಜೆಗೆ ಅರ್ಪಿಸುವ ಹೂಗಳನ್ನು ಯಾವುದೇ ಕಾರಣಕ್ಕೂ ಸಂಜೆ ನಂತರ ಕೀಳಲೇಬಾರದು ಸಂಜೆ ನಂತರ ಹೂಗಳ ಸುವಾಸನೆ ಮತ್ತು ಸೌಂದರ್ಯ ಎರಡೂ ಮಂಕಾಗುತ್ತದೆ. ಹಾಗಾಗಿ ರಾತ್ರಿ ವೇಳೆ ಕೀಳಬಾರದು
ಸಂಜೆ ನಂತರ ಹೂಗಳು, ಎಲೆಗಳನ್ನು ಕೀಳಬಾರದು ಎನ್ನುವುದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ
ರಾತ್ರಿ ವೇಳೆ ಗಿಡ, ಮರಗಳು ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತವೆ, ಆದ್ದರಿಂದ ಆ ಸಮಯದಲ್ಲಿ ಅವುಗಳನ್ನು ಮುಟ್ಟುವುದಾಗಲೀ, ಮರದ ಕೆಳಗೆ ಮಲಗುವುದಾಗಲೀ ಮಾಡಬಾರದು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು