ಹೋಳಿ ಹಬ್ಬಕ್ಕೆ ಶುಭಾಶಯ ಕೋರಲು ಇಲ್ಲಿವೆ ಕೋಟ್ಸ್‌ 

By Reshma
Mar 13, 2025

Hindustan Times
Kannada

ಭಾರತದಾದ್ಯಂತ ಹೋಳಿ ಹಬ್ಬದ ಸಂಭ್ರಮ ಶುರುವಾಗಿದೆ, ನಾಳೆ (ಮಾರ್ಚ್ 14) ಹೋಳಿ ಹುಣ್ಣಿಮೆ ಇದ್ದರೂ ಇಂದೇ ಎಲ್ಲೆಲ್ಲೂ ಸಡಗರ ಎದ್ದು ಕಾಣುತ್ತಿದೆ 

ಈ ವರ್ಷ ಹೋಳಿ ಹಬ್ಬಕ್ಕೆ ನೀವು ನಿಮ್ಮ ಆತ್ಮೀಯರಿಗೆ ವಿಶೇಷವಾಗಿ ವಿಶ್ ಮಾಡಬೇಕು ಎಂದುಕೊಂಡಿದ್ದರೆ ಇಲ್ಲಿವೆ ಒಂದಿಷ್ಟು ಶುಭಾಶಯ ಸಂದೇಶಗಳು 

ಈ ಹೋಳಿ ನಿಮ್ಮ ಜೀವನಕ್ಕೆ ಶಾಂತಿ, ಸಂತೋಷ ಹಾಗೂ ಸಂಭ್ರಮ ತರಲಿ. ಬಣ್ಣಗಳಂತೆ ನಿಮ್ಮ ಬದುಕಿನಲ್ಲಿ ಸಂತೋಷವು ಹರಡಿರಲಿ. ಹೋಳಿ ಹಬ್ಬದ ಶುಭಾಶಯಗಳು

ನಿಮಗೆಲ್ಲರಿಗೂ ಸಂತೋಷ, ಪ್ರೀತಿ ಮತ್ತು ಸಂಪತ್ತು ತುಂಬಿದ ಹೋಳಿ ಹಬ್ಬದ ಶುಭಾಶಯಗಳು

ಕಾಮನಹಬ್ಬದ ಶುಭಕಾಮನೆಗಳು. ಬಣ್ಣಗಳ ಹಬ್ಬ ನಿಮ್ಮ ಬದುಕಿನಲ್ಲಿ ವಿಶೇಷ ಬಣ್ಣವನ್ನು ಮೂಡಿಸಲಿ. ನಿಮ್ಮ ಬದುಕು ರಂಗಾಗಿರಲಿ 

ಹೋಳಿ ಹಬ್ಬದ ಸೌಂದರ್ಯವು ನಿಮ್ಮ ದಿನಗಳನ್ನು ಯಶಸ್ಸು ಮತ್ತು ಆಶಾವಾದದಿಂದ ಬೆಳಗಿಸಲಿ. ಬಣ್ಣಗಳ ಹಬ್ಬದ ಶುಭಾಶಯಗಳು

ಹೋಳಿಯ ರೋಮಾಂಚಕ ಬಣ್ಣಗಳು ನಿಮ್ಮ ಜೀವನವನ್ನು ಸಂತೋಷ, ಪ್ರೀತಿ ಮತ್ತು ಅಪರಿಮಿತ ಸಂಭ್ರಮದಿಂದ ಬೆಳಗಿಸಲಿ. ಹೋಳಿ ಹಬ್ಬದ ಶುಭಾಶಯಗಳು 

 ನಿಮ್ಮ ಹೃದಯದಲ್ಲಿ ಪ್ರೀತಿ ಮತ್ತು ಆತ್ಮದಲ್ಲಿ ಬಣ್ಣ ತುಂಬಿ ಹೋಳಿ ಆಚರಿಸಿ. ಈ ಹಬ್ಬವು ನಿಮಗೆ ಸಂತೋಷ ಮತ್ತು ಶಾಂತಿಯನ್ನು ತರಲಿ 

ಬಣ್ಣಗಳನ್ನು ಆನಂದಿಸಿ, ಉಲ್ಲಾಸದಿಂದ ನೃತ್ಯ ಮಾಡಿ ಮತ್ತು ಹೊಸ ಜೀವನ ಆರಂಭಿಸಿ. ಹೋಳಿ ಹಬ್ಬದ ಶುಭಾಶಯಗಳು

ಪತಿ ಸಿದ್ದೇಗೌಡ ಜತೆಗಿನ ಹನಿಮೂನ್‌ ಪೋಟೋ ಹಂಚಿಕೊಂಡ ಲಕ್ಷ್ಮೀ ನಿವಾಸ ಸೀರಿಯಲ್‌ ಭಾವನಾ