ಮಳೆಗಾಲದಲ್ಲಿ ಕಾಡುವ ಕೀಟಗಳನ್ನು ನಿಯಂತ್ರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
By Reshma Jul 21, 2024
Hindustan Times Kannada
ಮಳೆಗಾಲ ಮನಸ್ಸಿಗೆ ಖುಷಿ ಕೊಟ್ಟರು ಈ ಋತುಮಾನದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುವುದು ಸಹಜ. ಮಳೆಗಾಲದಲ್ಲಿ ಸೊಳ್ಳೆಗಳಂತೆ ಕೀಟಗಳ ಹೆಚ್ಚುವುದು ಸಹಜ. ಇವುಗಳ ನಿಯಂತ್ರಣಕ್ಕೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.
ಬೇವಿನಎಣ್ಣೆ: ಇದು ಕೀಟಗಳನ್ನು ಓಡಿಸುತ್ತದೆ. ಕೀಟಗಳು ಇರುವಲ್ಲಿ ಬೇವಿನಎಣ್ಣೆ ಸಿಂಪಡಸಿ, ಬೇವಿನ ಎಣ್ಣೆ ಇಲ್ಲ ಎಂದಾದರೆ ಬೇವಿನ ಎಲೆಗಳನ್ನು ಸಹ ಇರಿಸಬಹುದು.
ನಿಂಬೆಹಣ್ಣು ಮತ್ತು ಅಡುಗೆಸೋಡಾ: ಸ್ಪ್ರೇ ಬಾಟಲಿಯಲ್ಲಿ ನಿಂಬೆಹಣ್ಣು ಮತ್ತು ಅಡುಗೆಸೋಡಾವನ್ನು ಮಿಶ್ರಣ ಮಾಡಿ. ಇದು ಕೀಟಗಳನ್ನು ಕೊಲ್ಲಲು ಉತ್ತಮ ಔಷಧಿ. ಇದನ್ನು ಮನೆಯ ಹೊಸ್ತಿಲ ಮೇಲೂ ಸಿಂಪಡಿಸಬಹುದು. ನೊಣಗಳು ಬಾರದಂತೆ ತಡೆಯಲು ನೆಲ ಒರೆಸುವಾಗ ಈ ಮಿಶ್ರಣವನ್ನು ಸೇರಿಸಿಕೊಳ್ಳಬಹುದು.
ಲ್ಯಾವೆಂಡರ್ ಎಣ್ಣೆ: ಲ್ಯಾವೆಂಡರ್ ಎಣ್ಣೆಯನ್ನು ಹತ್ತಿ ಉಂಡೆಯಲ್ಲಿ ನೆನೆಸಿ, ಮನೆಯ ಕಿಟಕಿ ಹಾಗೂ ಬಾಗಿಲ ಬಳಿ ಇರಿಸಿ. ಕೀಟಗಳು ಇದರ ಬದಲಾದ ಸುಗಂಧವನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅವು ಮನೆಯೊಳಗೆ ಬರುವ ಪ್ರಯತ್ನ ಮಾಡುವುದಿಲ್ಲ.
ಕಾಳುಮೆಣಸಿನ ಪುಡಿ: ಕಾಳುಮೆಣಸಿನ ಪುಡಿಯನ್ನು ನೀರಿಗೆ ಬೆರೆಸಿ ಸ್ಪೇ ಬಾಟಲಿಯಲ್ಲಿ ತುಂಬಿಸಿ. ಈ ಮಿಶ್ರಣವನ್ನು ಮನೆಯ ಮೂಲೆ ಮೂಲೆಗಳಿಗೆ ಸಿಂಪಡಿಸಿ. ಇದು ಕೀಟಗಳನ್ನು ಸಾಯಿಸುವುದು ಮಾತ್ರವಲ್ಲ, ಒಳಗಡೆ ಸುಳಿಯದಂತೆ ನೋಡಿಕೊಳ್ಳುತ್ತವೆ.
ನಿಂಬೆಹುಲ್ಲು: ಲೆಮನ್ ಗ್ರಾಸ್ ಎಂದೂ ಇಂಗ್ಲಿಷ್‌ನಲ್ಲಿ ಕರೆಯುವ ನಿಂಬೆಹುಲ್ಲಿನ ವಾಸನೆಯು ಕೀಟಗಳಿಗೆ ಸಹ್ಯವಲ್ಲ. ಒಂದು ಗ್ಲಾಸ್ ಲೆಮನ್ ಗ್ರಾಸ್ ನೀರಿನೊಂದಿಗೆ ಸ್ವಲ್ಪ ವಿನೇಗರ್ ಸೇರಿಸಿ ಕಿಟಕಿ ಹಾಗೂ ಬಾಗಿಲ ಬಳಿ ಇರಿಸಿ, ಇದರ ವಾಸನೆಗೆ ಕೀಟಗಳು ಹತ್ತಿರ ಸುಳಿಯುವುದಿಲ್ಲ.
ಕರ್ಪೂರ: ಇದರ ವಾಸನೆಯನ್ನೂ ಕೀಟಗಳು ಇಷ್ಟಪಡುವುದಿಲ್ಲ. ಕೀಟಗಳನ್ನು ಓಡಿಸಲು ಮನೆಯಲ್ಲಿ ಕರ್ಪೂರವನ್ನು ಸುಟ್ಟು ಹಾಕಬೇಕು. ಮನೆಯಲ್ಲಿ ಯಾರಿಗಾದರೂ ಅಸ್ತಮಾ ಸಮಸ್ಯೆ ಇದ್ದರೆ ಕರ್ಪೂರ ಸುಡುವ ಬದಲು ಮೂಲೆಗಳಲ್ಲಿ ಇರಿಸಬಹುದು.
ತುಳಸಿ ರಸ: ತುಳಸಿ ರಸದಿಂದ ಕೀಟಗಳು ಓಡಿ ಹೋಗುತ್ತವೆ. ತುಳಸಿ ರಸ ಅಥವಾ ಎಣ್ಣೆಯನ್ನು ಸಿಂಪಡಿಸಿ. ಇದರಿಂದ ಕೀಟಗಳನ್ನು ಸುಲಭವಾಗಿ ಓಡಿಸಬಹುದು.
ಕೀಟಗಳನ್ನು ಓಡಿಸಲು ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದು ಖಚಿತ. ಅದಕ್ಕಿಂತ ಈ ನೈಸರ್ಗಿಕ ವಿಧಾನವನ್ನು ಬಳಸುವುದು ಉತ್ತಮ.