ಜಾತಕದಲ್ಲಿ ಸೂರ್ಯ ದುರ್ಬಲದಿಂದ ಆಗುವ ಪರಿಣಾಮ ಮತ್ತು ಪರಿಹಾರಗಳಿವು

By Raghavendra M Y
Apr 20, 2025

Hindustan Times
Kannada

ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಇದು ಆತ್ಮವಿಶ್ವಾಸ, ಖ್ಯಾತಿ, ಆರೋಗ್ಯವನ್ನು ಸಂಕೇತಿಸುತ್ತದೆ. ಜಾತಕದಲ್ಲಿ ಸೂರ್ಯ ದುರ್ಬಲವಾಗಿದ್ದರೆ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ

ಜಾತಕದಲ್ಲಿ ಸೂರ್ಯ ದುರ್ಬಲನಾಗಿದ್ದರೆ ಆತ್ಮವಿಶ್ವಾಸದ ಕೊರತೆ, ತಂದೆಯೊಂದಿಗೆ ಭಿನ್ನಾಭಿಪ್ರಾಯ, ಸರ್ಕಾರಿ ಕೆಲಸದಲ್ಲಿ ಅಡೆತಡೆಗಳು, ತಲೆ ನೋವು, ಹೃದಯ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು

ಪರಿಹಾರಗಳು - ಪ್ರತಿದಿನ ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ಸೂರ್ಯ ದೇವರಿಗೆ ತಾಮ್ರದ ಪಾತ್ರೆಯಿಂದ ನೀರನ್ನು ಅರ್ಪಿಸಿ. ನೀರಿನಲ್ಲಿ ಕೆಂಪು ಶ್ರೀಗಂಧ ಅಥವಾ ರೋಲಿಯನ್ನು ಬೆರೆಸಿ. ಇದರೊಂದಿಗೆ ಓಂ ಸೂರ್ಯಾಯ ನಮಃ ಎಂಬ ಮಂತ್ರವನ್ನು ಪಠಿಸಿ

ಭಾನುವಾರ ಸೂರ್ಯ ದೇವರಿಗಾಗಿ ಉಪವಾಸ ಮಾಡಿ. ಈ ದಿನ ಉಪ್ಪು ಸೇವಿಸುವುದನ್ನು ತಪ್ಪಿಸಿ. ಸೂರ್ಯನಿಗೆ ಕೆಂಪು ಬಟ್ಟೆ, ಬೆಲ್ಲ ಅಥವಾ ಬೇಳೆಯನ್ನು ಅರ್ಪಿಸಿ. ಸರಿಯಾದ ಪೂಜೆಯಿಂದ  ಸೂರ್ಯನ ಆಶೀರ್ವಾದ ಸಿಗುತ್ತೆ

ಓಂ ಹ್ರೀಂ ಸೂರ್ಯಾಯ ನಮಃ ಅಥವಾ ಆದಿತ್ಯ ಹೃದಯ ಸ್ತೋತ್ರವನ್ನು ಪ್ರತಿದಿನ 108 ಬಾರಿ ಜಪಿಸಿ. ಇದು ಸೂರ್ಯನ ಶಕ್ತಿಯನ್ನು ಹೆಚ್ಚಿಸುತ್ತೆ. ಜಾತಕದಲ್ಲಿ ಸೂರ್ಯನನ್ನು ಬಲಪಡಿಸುತ್ತದೆ

ಸೂರ್ಯನ ಬಣ್ಣ ಕೆಂಪು. ಭಾನುವಾರದಂದು ಕೆಂಪು ಬಟ್ಟೆಗಳನ್ನು ಧರಿಸಿ ಅಥವಾ ಸೂರ್ಯನಿಗೆ ಹೂವುಗಳು, ಬಟ್ಟೆ ಅಥವಾ ಬೆಲ್ಲದಂತಹ ಕೆಂಪು ವಸ್ತುಗಳನ್ನು ಅರ್ಪಿಸಿ. ಇದು ಸೂರ್ಯನ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ

ಭಾನುವಾರ ಬಡವರಿಗೆ ಅಕ್ಕಿ, ಬೆಲ್ಲ ಅಥವಾ ಕೆಂಪು ಬಟ್ಟೆಯನ್ನು ದಾನ ಮಾಡಿ. ಸೂರ್ಯನಿಗೆ ಸಂಬಂಧಿಸಿದ ದೇವಾಲಯಗಳಲ್ಲಿ ಸೇವೆ ಮಾಡಿ. ಇದು ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ಪರಿಣಾಮಕಾರಿಯಾಗಿದೆ

ಈ ಸಲುಭ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಜಾತಕದಲ್ಲಿ ಸೂರ್ಯನನ್ನು ಬಲಪಡಿಸಬಹುದು. ಸೂರ್ಯ ದೇವರ ಕೃಪೆಯಿಂದ ನಿಮಗೆ ಕೀರ್ತಿ, ಆರೋಗ್ಯ ಹಾಗೂ ಸಮೃದ್ಧಿ ಸಿಗುತ್ತದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ 5 ಆಹಾರಗಳಿವು

PEXELS, MEDICAL NEWS TODAY