ಜಾತಕದಲ್ಲಿ ಮಂಗಳ ಗ್ರಹ ದುರ್ಬಲವಾಗಿದ್ದರೆ ಈ ಪರಿಹಾರಗಳನ್ನು ಮಾಡಿ
By Raghavendra M Y
Mar 26, 2025
Hindustan Times
Kannada
ಹಿಂದೂ ಧರ್ಮದಲ್ಲಿ ನವಗ್ರಹಗಳಿಗೆ ವಿಶೇಷ ಮಹತ್ವವಿದೆ. 9 ಗ್ರಹಗಳಲ್ಲಿ ಮಂಗಳನನ್ನು ಭೂಮಿಯ ಮಗ ಎಂದು ಕರೆಯಲಾಗುತ್ತದೆ
ವ್ಯಕ್ತಿಯ ಜಾತಕದಲ್ಲಿ ಮಂಗಳ ಬಲವಾಗಿದ್ದರೆ ಜೀವನದಲ್ಲಿ ಸಂತೋಷ ಇರುತ್ತದೆ. ದುರ್ಲಬವಾಗಿದ್ದರೆ ಸವಾಲುಗಳು ಎದುರಾಗುತ್ತವೆ
ಜಾತಕದಲ್ಲಿ ಮಂಗಳನ ಸ್ಥಾನವನ್ನು ಬಲಪಡಿಸಲು ಹನುಮಾನ್ ಚಾಲೀಸಾ, ಸುಂದರಕಾಂಡ ಸ್ತೋತ್ರ, ಭಜರಂಗ್ ಬಾನ್ ಮಂತ್ರ ಪಠಿಸಬೇಕು
ಜಾತಕದಲ್ಲಿ ಮಂಗಳನ ದುರ್ಬಲದಿಂದ ಬಳಲುತ್ತಿರುವ ವ್ಯಕ್ತಿ ಗೋದಿ, ಬೆಲ್ಲ, ಬೆಂಕಿ ಕಡ್ಡಿ, ತ್ರಾಮ ಹಾಗೂ ಹಸುವಿಗೆ ಕೆಂಪು ಬಟ್ಟೆ, ಮೇವನ್ನು ದಾನ ಮಾಡಬೇಕು
ಶಾಸ್ತ್ರಗಳ ಪ್ರಕಾರ, ಮಂಗಳ ದೋಷದಿಂದ ಮದುವೆಯಲ್ಲಿ ಅಡೆತಡೆಗಳು ಉಂಟಾದರೆ, ಮಂಗಳವಾರ ಉಪ್ಪು ತಿನ್ನದೆ ಉಪವಾಸ ಮಾಡಬೇಕು
ಮಂಗಳ ಗ್ರಹವನ್ನು ಬಲಪಡಿಸಲು ಮಂಗಳವಾರದಂದು ಆಂಜನೇಯ ದೇವಾಲಯದಲ್ಲಿ ರಾಮನ ಹೆಸರು ಬರೆದ ತ್ರಿಕೋನಾಕಾರದ ಕಿತ್ತಳೆ ಬಣ್ಣದ ಧ್ವಜವನ್ನು ಅರ್ಪಿಸಬೇಕು
ಆಂಜನೇಯನಿಗೆ ವೀಳ್ಯದೆಲೆ ಅರ್ಪಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದು ಗ್ರಹ ದೋಷದಿಂದ ಉಂಟಾಗುವ ಆರ್ಥಿಕ ಸಮಸ್ಯೆಯನ್ನು ಪರಿಹರಿಸುತ್ತೆ
ಮಂಗಳ ಗ್ರಹದ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಮಂಗಳವಾರ ಆಂಜನೇಯನಿಗೆ ಬೂಂದಿ ಪ್ರವಾಸದನ್ನ ಅರ್ಪಿಸಿ ನಂತರ ಅದನ್ನು ಎಲ್ಲರಿಗೂ ಹಂಚಬೇಕು
ಜಾತಕದಲ್ಲಿ ಮಂಗಳನ ಸ್ಥಾನ ಸುಧಾರಿಸಲು ಓಂ ಕ್ರಾಂ ಕ್ರೀಂ ಕ್ರೌಂ ಸಃ ಭೌಮೇ ನಮಃ ಎಂಬ ಮಂಗಳನ ಬೀಜ ಮಂತ್ರವನ್ನು ಜಪಿಸಬೇಕು
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ವಿಶ್ವ ವಿಖ್ಯಾತ ಹೋಗ ಜಲಪಾತ ಪ್ರವಾಸಿಗರ ವೀಕ್ಷಣೆಗೆ ಲಭ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ