ಲಕ್ಷ್ಮಿ ನಾರಾಯಣ ಯೋಗದಿಂದ ಯಾವ ರಾಶಿಯವರಿಗೆ ಹೆಚ್ಚು ಪ್ರಯೋಜನ

By Raghavendra M Y
Nov 29, 2024

Hindustan Times
Kannada

ಜ್ಯೋತಿಷ್ಯದಲ್ಲಿ ಗ್ರಹಗಳು, ನಕ್ಷತ್ರಗಳ ಬದಲಾವಣೆಗಳಿಂದ ಯೋಗಗಳು ವಿಶೇಷ ಮಹತ್ವವನ್ನು ಪಡೆದಿವೆ. ಇವುಗಳಲ್ಲಿ ಲಕ್ಷ್ಮಿ ನಾರಾಯಣ ಯೋಗವೂ ಒಂದು

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಶುಕ್ರ ಮತ್ತು ಬುಧ ಸಂಯೋಗವಿದ್ದರೆ ಆಗ ಲಕ್ಷ್ಮಿ ನಾರಾಯಣ ಯೋಗ ಉಂಟಾಗುತ್ತದೆ

ಜಾತಕದಲ್ಲಿ ಶುಕ್ರ ಮತ್ತು ಬುಧ ಒಟ್ಟಿಗೆ ಬರುವುದು ಬಹಳ ಫಲಪ್ರದ ಹಾಗೂ ಮಂಗಳಕರವೆಂದು ಪರಿಗಣಿಸಲಾಗಿದೆ

ಲಕ್ಷ್ಮಿ ನಾರಾಯಣ ಯೋಗವು ಸಂಕ್ರಮಣದ ಯಾವುದೇ ಸಮಯದಲ್ಲಿ ರೂಪಗೊಂಡರೆ ಇದರಿಂದ 5 ರಾಶಿಗಳು ಪ್ರಯೋಜನ ಪಡೆಯುತ್ತವೆ

ವೃಷಭ ರಾಶಿ:  ಈ ರಾಶಿಯ ಆಡಳಿತ ಗ್ರಹ ಶುಕ್ರ. ಲಕ್ಷ್ಮಿ ನಾರಾಯಣ ಯೋಗವು ಈ ರಾಶಿಯವಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ

ಮಿಥುನ ರಾಶಿ:  ಈ ರಾಶಿಯ ಆಡಳಿತ ಗ್ರಹ ಬುಧ. ಲಕ್ಷ್ಮಿ ನಾರಾಯಣ ಯೋಗದಿಂದಾಗಿ ಇವರಿಗೆ ಆರ್ಥಿಕ ಬಿಕ್ಕಟ್ಟು ಕೊನೆಗೊಳ್ಳುತ್ತದೆ

ಕನ್ಯಾ ರಾಶಿ:  ಈ ರಾಶಿಯವರ ಆಡಳಿತ ಗ್ರಹವೂ ಬುಧ. ಈ ಯೋಗದಿಂದ ಇವರಿಗೆ ಸಮೃದ್ಧಿ ಇರುತ್ತದೆ

ತುಲಾ ರಾಶಿ:  ತಕ್ಕಡಿ ಚಿಹ್ನೆಯ ಈ ರಾಶಿಯವರ ಆಡಳಿತ ಗ್ರಹ ಶುಕ್ರ. ಲಕ್ಷ್ಮಿ ನಾರಾಯಣ ಯೋಗದಿಂದ ಸಂಪತ್ತಿನ ಲಾಭವನ್ನು ಪಡೆಯುತ್ತಾರೆ

ಮಕರ ರಾಶಿ:  ಈ ರಾಶಿಯವರ ಆಡಳಿತ ಗ್ರಹ ಶನಿ. ಶನಿಯು ಬುಧ ಮತ್ತು ಶುಕ್ರನೊಂದಿಗೆ ಸ್ನೇಹವನ್ನು ಹೊಂದಿದ್ದಾನೆ. ಈ ರಾಶಿಯವರ ಹೆಚ್ಚಿನ ಪ್ರಯೋಜನಗಳಿವೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಕೊಹ್ಲಿ-ಧೋನಿ ಬಳಿಕ ರೋಹಿತ್ ಮುಜುಗರದ ದಾಖಲೆ