ಪೂರ್ಣ ಹೃದಯದಿಂದ ಪ್ರೀತಿಸುವ ರಾಶಿಯವರು ಇವರೇ; ಖುಷಿಯಾಗಿ ಇರುತ್ತಾರೆ
By Raghavendra M Y May 14, 2025
Hindustan Times Kannada
ಜನ್ಮ ದಿನಾಂಕ, ಕುಂಡಲಿ ಆಧಾರದ ಮೇಲೆ ವ್ಯಕ್ತಿ ಗುಣಗಳನ್ನು ತಿಳಿಯಬಹುದು. ಯಾವ ರಾಶಿಯವರು ಪೂರ್ಣ ಹೃದಯದಿಂದ ಪ್ರೀತಿಸುತ್ತಾರೆ ಎಂಬುದನ್ನು ತಿಳಿಯೋಣ
ಕಟಕ ರಾಶಿ: ಇವರು ಚಂದ್ರನಿಂದ ಆಳಲ್ಪಡುತ್ತಾರೆ. ಆಳವಾದ ಭಾವನೆಗಳು, ರಕ್ಷಣಾತ್ಮಕವಾಗಿ ಇರುತ್ತಾರೆ. ಹೃದಯಾಂತರಾಳದಿಂದ ಪ್ರೀತಿಸುತ್ತಾರೆ
ಸಿಂಹ ರಾಶಿ: ಈ ರಾಶಿಯವರರು ಧೈರ್ಯದಿಂದ ಮತ್ತು ಹೆಮ್ಮೆಯಿಂದ ಪ್ರೀತಿಸುತ್ತಾರೆ. ಸಂಗಾತಿ ಬಿದ್ದಾಗ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇವರಲ್ಲಿ ಪ್ರೀತಿಗೆ ಕೊರತೆಯೇ ಇರುವುದಿಲ್ಲ
ವೃಶ್ಚಿಕ ರಾಶಿ: ಇವರು ಕೇವಲ ಪ್ರೀತಿಸುವುದಷ್ಟೇ ಅಲ್ಲ ನಿಮ್ಮಲ್ಲಿ ಒಬ್ಬರಾಗಿಬಿಡುತ್ತಾರೆ. ಆಳವಾದ ಬಂಧಗಳನ್ನು ನಿರ್ಮಿಸುತ್ತಾರೆ. ಇವರಿಗೆ ಪ್ರೀತಿಯೇ ಎಲ್ಲವೂ ಆಗಿರುತ್ತದೆ
ಮೀನ ರಾಶಿ: ಈ ರಾಶಿಯವರು ಪ್ರೀತಿಯನ್ನು ಮ್ಯಾಜಿಕ್ ರೀತಿ ನೋಡುತ್ತಾರೆ. ಪ್ರೀತಿಗಾಗಿ ಸಾಕಷ್ಟು ತ್ಯಾಗವನ್ನು ಮಾಡುತ್ತಾರೆ. ಸಂಗಾತಿಗೆ ಬೆಂಬಲವಾಗಿ ನಿಲ್ಲುತ್ತಾರೆ
ವೃಷಭ ರಾಶಿ: ಸಮಯ, ಸ್ಪರ್ಶ ಹಾಗೂ ಅಚಲ ನಿಷ್ಠೆಯ ಮೂಲಕ ಇವರು ಪ್ರೀತಿಸುತ್ತಾರೆ. ಎಂತಹ ಕಠಿಣ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುತ್ತಾರೆ. ತುಂಬಾ ಸಂತೋಷವಾಗಿರುತ್ತಾರೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ