ಭಾರತದಲ್ಲಿ ಹೋಟೆಲ್‌ಗಳು 3 ಅಥವಾ 5 ಸ್ಟಾರ್ ಸ್ಥಾನಮಾನವನ್ನು ಹೇಗೆ ಪಡೆಯುತ್ತವೆ?

Pinterest

By Priyanka Gowda
Feb 01, 2025

Hindustan Times
Kannada

ಪ್ರಯಾಣದ ವೇಳೆ ಅಥವಾ ಕೆಲವು ಪ್ರಮುಖ ಕೆಲಸಗಳಿಗಾಗಿ ಮನೆಯಿಂದ ತುಂಬಾ ದೂರ ಹೋದಾಗ ಹೋಟೆಲ್‌ಗಳಲ್ಲಿ ತಂಗುವುದು ಸಾಮಾನ್ಯ.

Pinterest

ನೀವು ಕೂಡ ಹೋಟೆಲ್‌ಗಳಲ್ಲಿ ತಂಗಿದ್ದರೆ 3 ಸ್ಟಾರ್ ಅಥವಾ 5 ಸ್ಟಾರ್ ಪದಗಳನ್ನು ಕೇಳಿರಬಹುದು. ಈ ಸ್ಥಾನಮಾನವನ್ನು ಹೋಟೆಲ್‌ಗಳು ಹೇಗೆ ಪಡೆಯುತ್ತವೆ ಎಂಬುದು ನಿಮಗೆ ತಿಳಿದಿದೆಯೇ?

ಇತ್ತೀಚಿನ ದಿನಗಳಲ್ಲಿ ಹೋಟೆಲ್‌ಗಳು ತಮ್ಮ ಹೋಟೆಲ್ ಎಷ್ಟು ಸ್ಟಾರ್‌ಗಳದ್ದು ಎಂದು ಅವರೇ ಹೇಳುತ್ತಾರೆ. ಆದರೆ, ಅಧಿಕೃತವಾಗಿ ಈ ಸ್ಟಾರ್ ರೇಟಿಂಗ್ (ಸ್ಥಾನಮಾನ) ಪಡೆಯುವ ಪ್ರಕ್ರಿಯೆಯೇ ಬೇರೆ.

Pinterest

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿ ಒಂದು ಸಮಿತಿಯಿದೆ. ಇದು ಹೋಟೆಲ್, ರೆಸ್ಟೋರೆಂಟ್‍ಗಳಿಗೆ ಸ್ಟಾರ್ ರೇಟಿಂಗ್ ನೀಡುತ್ತದೆ.

Pinterest

ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಹೋಟೆಲ್ ಮತ್ತು ರೆಸ್ಟೋರೆಂಟ್ ಅನುಮೋದನೆ ಮತ್ತು ವರ್ಗೀಕರಣ ಸಮಿತಿ ಈ ಸ್ಥಾನಮಾನವನ್ನು ನೀಡುತ್ತದೆ.

Pinterest

ಹೋಟೆಲ್‌ಗೆ ಸ್ಟಾರ್ ರೇಟಿಂಗ್ ನೀಡುವ ಸಮಿತಿಯು ಮೊದಲು ಹೋಟೆಲ್‌ಗೆ ಭೇಟಿ ನೀಡಿ ಸೇವೆ, ಶುಚಿತ್ವ, ಹೋಟೆಲ್ ಕೊಠಡಿಗಳು, ಅವುಗಳ ಗಾತ್ರ ಮತ್ತು ಇತರ ಪರಿಕರಗಳನ್ನು ಪರಿಶೀಲಿಸುತ್ತದೆ.

Pinterest

ಸಮಿತಿಯ ಮಾರ್ಗಸೂಚಿಗಳ ಹೊಂದಾಣಿಕೆಯ ಆಧಾರದ ಮೇಲೆ ರೇಟಿಂಗ್ ಅನ್ನು ನಿರ್ಧರಿಸಲಾಗುತ್ತದೆ. ಸ್ಥಾನಮಾನವನ್ನು ನೀಡುವ ಮುನ್ನ ಅನೇಕ ವಿಷಯಗಳನ್ನು ಪರಿಶೀಲಿಸುತ್ತದೆ. 

Pinterest

ಹೋಟೆಲ್ ರೇಟಿಂಗ್‌ನಲ್ಲಿ ಎರಡು ವಿಭಾಗಗಳಿವೆ. ಮೊದಲನೆಯದು ಸ್ಟಾರ್ ವರ್ಗ ಮತ್ತು ಎರಡನೆಯದು ಹೆರಿಟೇಜ್ (ಪಾರಂಪರಿಕ) ವರ್ಗ.

Pinterest

ಸ್ಟಾರ್ ವರ್ಗದಲ್ಲಿ ಹೋಟೆಲ್‌ಗಳಿಗೆ, 5 ಸ್ಟಾರ್ ಡೀಲಕ್ಸ್, 5 ಸ್ಟಾರ್, 4 ಸ್ಟಾರ್, 3 ಸ್ಟಾರ್, 2 ಸ್ಟಾರ್ ಮತ್ತು 1 ಸ್ಟಾರ್ ರೇಟಿಂಗ್‍ಗಳನ್ನು ನೀಡಲಾಗುತ್ತದೆ.

Pinterest

ಹೆರಿಟೇಜ್ (ಪಾರಂಪರಿಕ) ವಿಭಾಗದಲ್ಲಿ, ಹೋಟೆಲ್‍ಗಳಿಗೆ ಹೆರಿಟೇಜ್ ಗ್ರ್ಯಾಂಡ್, ಹೆರಿಟೇಜ್ ಕ್ಲಾಸಿಕ್, ಹೆರಿಟೇಜ್ ಬೇಸಿಕ್ ಮುಂತಾದ ಸ್ಥಾನಮಾನವನ್ನು ನೀಡಲಾಗುತ್ತದೆ.

Pinterest

ಕಾಲುಗಳು ಏಕೆ ಊದಿಕೊಳ್ಳುತ್ತವೆ? ಇಲ್ಲಿದೆ ಕಾರಣ