ಕೇಂದ್ರ ಬಜೆಟ್ 2025

ಹೊಸ ಆದಾಯ ತೆರಿಗೆ ನಿಮ್ಮ ಮೇಲೆ ಯಾವ ಪರಿಣಾಮ ಬೀರಲಿದೆ?

By Praveen Chandra B
Feb 01, 2025

Hindustan Times
Kannada

ಫೆಬ್ರವರಿ 1ರಂದು ಮಂಡಿಸಿದ ಕೇಂದ್ರ ಬಜೆಟ್ 2025ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಘೋಷಿಸಿದ್ದಾರೆ. 

UNSPLASH

ಹೊಸ ತೆರಿಗೆ ವ್ಯವಸ್ಥೆಯಡಿ ವರ್ಷಕ್ಕೆ 12 ಲಕ್ಷ ರೂ.ವರೆಗಿನ ಆದಾಯದ ಮೇಲೆ ಶೂನ್ಯ ತೆರಿಗೆಯನ್ನು ಸರ್ಕಾರ ಪ್ರಸ್ತಾಪಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹೊಸ ತೆರಿಗೆ ದರಗಳು ನಿಮ್ಮ ತೆರಿಗೆ ವೆಚ್ಚದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ವಿವರ ಇಲ್ಲಿ ನೀಡಲಾಗಿದೆ

UNSPLASH

12 ಲಕ್ಷ ರೂವರೆಗೆ

ವಾರ್ಷಿಕ 12 ಲಕ್ಷ ರೂ.ಗಳ ಆದಾಯ ಹೊಂದಿರುವ ತೆರಿಗೆದಾರನಿಗೆ ಹೊಸ ತೆರಿಗೆ ಪದ್ಧತಿಯಲ್ಲಿ 80,000 ರೂಪಾಯಿ ಉಳಿತಾಯವಾಗುತ್ತದೆ. 

PIXABAY

 18 ಲಕ್ಷ ರೂ.ವರೆಗೆ

18 ಲಕ್ಷ ಆದಾಯ ಹೊಂದಿರುವ ವ್ಯಕ್ತಿಗಳು 70,000 ರೂ.ಗಳ ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ, ಇದು ಅಸ್ತಿತ್ವದಲ್ಲಿರುವ ದರಗಳ ಅಡಿಯಲ್ಲಿ ಪಾವತಿಸಬೇಕಾದ ತೆರಿಗೆಯ ಶೇಕಡ 30 ಆಗಿದೆ

PIXABAY

 25 ಲಕ್ಷ ರೂವರೆಗೆ

25 ಲಕ್ಷ ರೂ.ಗಳ ಆದಾಯವಿರುವ ಒಬ್ಬ ವ್ಯಕ್ತಿಯು 1,10,000 ರೂ.ಗಳ ತೆರಿಗೆ ಪ್ರಯೋಜನವನ್ನು ಪಡೆಯುತ್ತಾನೆ. ಇದು ಅಸ್ತಿತ್ವದಲ್ಲಿರುವ ದರಗಳ ಅಡಿಯಲ್ಲಿ ಪಾವತಿಸಬೇಕಾದ ತೆರಿಗೆಯ ಶೇಕಡ 25 ಆಗಿದೆ.

PIXABAY

ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್‌