ಮಾವು ಹಣ್ಣಾಗಿದೆಯೇ ಇಲ್ವಾ ತಿಳಿಯುವುದು ಹೇಗೆ?

By Raghavendra M Y
Jun 17, 2024

Hindustan Times
Kannada

ಹಣ್ಣುಗಳ ರಾಜ ಮಾವು ಬೇಸಿಗೆ ಕಾಲದ ಹಣ್ಣು. ಈ ಋತುವಿನಲ್ಲಿ ರಸಭರಿತವಾದ ಮಾವಿನ ಹಣ್ಣಿನಿಂದ ಹಲವು ಬಗೆಯ ಖಾದ್ಯಗಳನ್ನ ತಯಾರಿಸಲಾಗುತ್ತೆ

ದಶೇರಿ, ಚೌಸಾ, ಮಾಲ್ಡಾ, ಲಾಂಗ್ರಾ ಮುಂತಾದ ತಳಿಗಳ ಮಾವುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಮಾವಿನಹಣ್ಣಿನ ರುಚಿ ಕೂಡ ಹೆಚ್ಚಿರುತ್ತೆ

ಅನೇಕ ಬಾರಿ ಮಾರುಕಟ್ಟೆಯಿಂದ ಮಾವಿನ ಹಣ್ಣುಗಳನ್ನು ಖರೀದಿಸುತ್ತೇವೆ. ಆದರೆ ನಾವು ಮನೆಗೆ ಬಂದು ಕತ್ತರಿಸಿ ನೋಡಿದರೆ ಅವು ಕಾಯಿಯಾಗಿಯೇ ಇರುತ್ತವೆ

ಕೆಲವೊಂದು ಮಾವು ಹಣ್ಣಾದರೆ ಮಾತ್ರ ತಿನ್ನಲು ರುಚಿಕರವಾಗಿರುತ್ತವೆ. ಕೆಲವು ತಂತ್ರಗಳನ್ನು ಅನುಸರಿಸುವ ಮೂಲಕ ಮಾಗಿದ ಹಣ್ಣುಗಳನ್ನು ಸುಲಭವಾಗಿ ಗುರುತಿಸಬಹುದು

ಕತ್ತರಿಸದೆಯೇ ಮಾವು ಮಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು. ಆ ತಂತ್ರಗಳನ್ನು ಇಲ್ಲಿ ತಿಳಿಯೋಣ

ಮಾವು ಚೆನ್ನಾಗಿ ಮಾಗಿದ್ದರೆ ಅದರ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕೆಲವು ಸಲ ಮಾವು ಹಣ್ಣಾಗದಿದ್ದರೂ ಹಳದಿ ಬಣ್ಣದಲ್ಲೇ ಇರುತ್ತೆ

ಮಾವಿನ ಹಣ್ಣಿನಲ್ಲಿ ಎಥಲೀನ್ ಅಂಶದಿಂದಾಗಿ ಸಿಹಿ ವಾಸನೆ ಬರುತ್ತದೆ. ಆದರೆ ಅದನ್ನು ಮಾಗಿಸಲು ರಾಸಾಯನಿಕಗಳನ್ನು ಬಳಸಿದ್ದರೆ ಅದು ಸುವಾಸನೆ ಬರುವುದಿಲ್ಲ

ಹಣ್ಣಾದ ಮಾವನ್ನು ಕೈಯಲ್ಲಿ ತೆಗೆದುಕೊಂಡರೆ ಸ್ವಲ್ಪ ತಿರುಳಿರುವಂತೆ ಭಾಸವಾಗುತ್ತೆ. ಆದರೆ ಹಸಿ ಮಾವು ಕೈಯಲ್ಲಿ ತೆಗೆದುಕೊಂಡರೆ ಬಿಗಿಯಾಗಿರುತ್ತೆ

ಮಾವಿನ ಹಣ್ಣಿನಲ್ಲಿ ಯಾವುದೇ ರೀತಿಯ ಕಲೆಗಳಿದ್ದರೆ ಅದನ್ನು ಖರೀದಿಸಬೇಡಿ. ರಾಸಾಯನಿಕಗಳಿಂದಾಗಿ ಮಾವಿನ ಹಣ್ಣಿನ ಮೇಲೆ ಕೆಲವೊಮ್ಮೆ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ

ಮಾರುಕಟ್ಟೆಯಿಂದ ಖರೀದಿಸಿದ ಮಾವಿನ ಹಣ್ಣನ್ನು ಶುದ್ಧ ನೀರಿನಿಂದ ತೊಳೆದು 1-2 ಗಂಟೆಗಳ ಕಾಲ ತಂಪಾದ ಸ್ಥಳದಲ್ಲಿ ಇರಿಸಿದ ನಂತರ ಆಹಾರದೊಂದಿಗೆ ಬಳಸಿ

ಗುಲಾಬಿಯಂತೆ ಅರಳಿದ ಸಪ್ತಮಿ ಗೌಡ; ಸಿಂಪಲ್ ಕುರ್ತಾದಲ್ಲೂ ಸಖತ್ ಕ್ಯೂಟ್‌