ಪೆಟ್ರೋಲ್‌ ಮತ್ತು ಡೀಸೆಲ್‌ ತುಂಬುವಾಗ ಈ ತಪ್ಪು ಮಾಡಬೇಡಿ 

By Praveen Chandra B
Oct 08, 2024

Hindustan Times
Kannada

ಪೆಟ್ರೋಲ್‌ ಪಂಪ್‌ನಲ್ಲಿ ಇಂಧನ ತುಂಬುವಾಗ ಗ್ರಾಹಕರು ಕೆಲವು ವಿಷಯಗಳ ಕುರಿತು ಎಚ್ಚರಿಕೆಯಿಂದ ಇರಬೇಕು.

ಇಂಧನದ ಸಾಂದ್ರತೆ ತಿಳಿದುಕೊಳ್ಳಬೇಕು. ಸರಕಾರವೇ ನಿರ್ದಿಷ್ಟ ಸಾಂದ್ರತೆ ನಿಗದಿಪಡಿಸಿದೆ. ಅದಕ್ಕಿಂತ ಕಡಿಮೆ ಸಾಂದ್ರತೆ ಇರಬಾರದು.

ಮೀಟರ್‌ನಲ್ಲಿಯೇ ನೀವು ಸಾಂದ್ರತೆಯನ್ನು ಪರಿಶೀಲಿಸಬಹುದು. ಪೆಟ್ರೋಲ್‌ ಬಂಕ್‌ನಲ್ಲಿ ನೀಡುವ ರಸೀದಿಯಲ್ಲಿ ಸಾಂದ್ರತೆ ವಿವರ ಇರುತ್ತದೆ. 

ಇದರೊಂದಿಗೆ ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ತುಂಬಿಸುವ ಮೊದಲು ಝೀರೋ ಇರುವುದನ್ನು ಖಚಿತಪಡಿಸಿ.

ಬೆಸ ಸಂಖ್ಯೆಯ ಮೊತ್ತದಲ್ಲಿ ಇಂಧನ ತುಂಬಿಸಿ. ಅಂದರೆ, 515 ರೂಪಾಯಿ, 575 ರೂಪಾಯಿ, 1355 ರೂಪಾಯಿ ಎಂದೆಲ್ಲ ಬೆಸ ಸಂಖ್ಯೆಗಳ ಮೊತ್ತದಲ್ಲಿ ಇಂಧನ ಖರೀದಿಸಿ.

ಸಾಮಾನ್ಯ ಕಾರುಗಳಿಗೆ ಅತ್ಯಧಿಕ ಗುಣಮಟ್ಟದ ಹೆಸರಿನ ಪೆಟ್ರೋಲ್‌ ಅಗತ್ಯ ಇರುವುದಿಲ್ಲ. ಇದಕ್ಕೆ ಹೆಚ್ಚು ಪಾವತಿಸಬೇಡಿ.

ಊರಿನಲ್ಲಿ, ನಗರದಲ್ಲಿ ನಂಬಿಕಸ್ಥ ಎನಿಸುವಂತಹ ಪೆಟ್ರೋಲ್‌ ಬಂಕ್‌ ಬಳಸಿ.

ಪೆಟ್ರೋಲ್‌ ತುಂಬಿಸಿದ ಬಳಿಕ ಮುಗಿಯುವ ತನಕ ಮೈಲೇಜ್‌ ಚೆಕ್‌ ಮಾಡಿ. ಈ ಅಭ್ಯಾಸ ನಿರಂತರವಾಗಿರಲಿ.

ಹೆಚ್ಚು ಆದಾಯ ಗಳಿಸಲು ಕೌಶಲ್ಯ ಕಲಿಸುವ 6 ಉಚಿತ ಆನ್‌ಲೈನ್ ಕೋರ್ಸ್‌ಗಳು

Photo credit: Unsplash