ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?

By Rakshitha Sowmya
Jan 17, 2025

Hindustan Times
Kannada

ಬಾದಾಮಿಯಲ್ಲಿ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳು ಇವೆ, ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ತಿನ್ನುತ್ತಾರೆ

ಪೋಷಕಾಂಶ

ಆದರೆ ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಹೆಚ್ಚಾಗಿದ್ದು ಮಾರುಕಟ್ಟೆಯಲ್ಲಿ ನಕಲಿ ಬಾದಾಮಿ ಮಾರಲಾಗುತ್ತಿದೆ

ಕಲಬೆರಕೆ 

ನಕಲಿ ಬಾದಾಮಿ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ

ಆರೋಗ್ಯ ಸಮಸ್ಯೆ

ನೀವು ತಂದಿರುವ ಬಾದಾಮಿ ಅಸಲಿಯೋ, ನಕಲಿಯೋ ಗುರುತಿಸುವುದು ಹೇಗೆ?

ಗುರುತಿಸುವುದು ಹೇಗೆ

ಬಾದಾಮಿಯನ್ನು ನೈಜವಾಗಿ ಕಾಣುವಂತೆ ಮಾಡಲು ಬಣ್ಣ ಬಳಸಲಾಗುತ್ತದೆ. ಬಾದಾಮಿಯನ್ನು ಕೈ, ಬಟ್ಟೆಯಿಂದ ಉಜ್ಜಿದಾಗ ನಿಮ್ಮ ಕೈಗೆ ಬಣ್ಣ ಅಂಟಿಕೊಂಡರೆ ಅದು ನಕಲಿ ಬಾದಾಮಿ ಎಂದರ್ಥ

ಕೈಗೆ ಅಂಟುವ ಬಣ್ಣ

ಒಂದು ಪೇಪರ್‌ ಮೇಲೆ ಬಾದಾಮಿ ಇಟ್ಟು ಅದನ್ನು ಜಜ್ಜಿ, ಅಸಲಿ ಆದರೆ ತೈಲ ಬರುತ್ತದೆ, ಇಲ್ಲವಾದರೆ ಎಣ್ಣೆ ಬರುವುದಿಲ್ಲ

ತೈಲ

ಅಸಲಿ ಬಾದಾಮಿಯ ಪರಿಮಳವನ್ನು ಹೊಂದಿರುತ್ತದೆ, ಆದರೆ ನಕಲಿ ಬಾದಾಮಿಗೆ ಯಾವುದೇ ಪರಿಮಳ ಇರುವುದಿಲ್ಲ

ಪರಿಮಳ

ನೀರಿನಲ್ಲಿ ನೆನೆಸಿದಾಗ ನಿಜವಾದ ಬಾದಾಮಿಗಳು ಮುಳುಗುತ್ತವೆ, ನಕಲಿ ಬಾದಾಮಿ ನೀರಿನ ಮೇಲ್ಬಾಗ ತೇಲುತ್ತದೆ

ನೀರಿನಲ್ಲಿ ಮುಳುಗುತ್ತವೆ

ನಿಜವಾದ ಬಾದಾಮಿ ತಿಳಿ ಕಂದು ಬಣ್ಣವಿರುತ್ತದೆ. ನಕಲಿ ಬಾದಾಮಿ ಕಪ್ಪು ಅಥವಾ ಗಾಢ ಕಂದು ಬಣ್ಣವಿರುತ್ತದೆ

ತಿಳಿ ಕಂದು ಬಣ್ಣ

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr