ಕಾಮಕಸ್ತೂರಿ ಬೀಜದ ರುಚಿಕರ ಸ್ಮೂಥಿ ಪಾಕವಿಧಾನ ಇಲ್ಲಿದೆ

Image Credits: Adobe Stock

By Priyanka Gowda
Jan 30, 2025

Hindustan Times
Kannada

ಕಡಿಮೆ ಕ್ಯಾಲೋರಿ, ಪೋಷಕಾಂಶಗಳಿಂದ ತುಂಬಿದ ಕಾಮಕಸ್ತೂರಿ ಬೀಜದ ಸ್ಮೂಥಿಯನ್ನು ಬೆಳಗ್ಗಿನ ಉಪಾಹಾರ ಅಥವಾ ಸಂಜೆಯೂ ಸವಿಯಬಹುದು.

Image Credits: Adobe Stock

ಕಾಮಕಸ್ತೂರಿ ಅಥವಾ ಚಿಯಾ ಬೀಜದ ಸ್ಮೂಥಿ ತಯಾರಿಸುವುದು ಸುಲಭ ಮಾತ್ರವಲ್ಲ, ಇದು ಅನೇಕ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. 

Image Credits: Adobe Stock

ಇದರಲ್ಲಿ ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಹೇರಳವಾಗಿದೆ.

Image Credits : Adobe Stock

ಕಾಮಕಸ್ತೂರಿ ಬೀಜದ ಸ್ಮೂಥಿ ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ

Image Credits: Adobe Stock

1/2 ಕಪ್ ಕಾಮಕಸ್ತೂರಿ ಬೀಜ, 2 ಕಪ್ ಸಿಹಿರಹಿತ ಬಾದಾಮಿ ಹಾಲು, 2 ಚಮಚ ಜೇನುತುಪ್ಪ, ಸ್ಟ್ರಾಬೆರಿ, ಕಪ್ಪು ದ್ರಾಕ್ಷಿ, ಸೇಬು ಹಣ್ಣು, ಒಣಹಣ್ಣುಗಳು (ನಿಮ್ಮ ಆಯ್ಕೆಯ ಯಾವುದೇ ಹಣ್ಣು, ಒಣಹಣ್ಣುಗಳನ್ನು ಬೆರೆಸಬಹುದು).

ಬೇಕಾಗುವ ಸಾಮಗ್ರಿಗಳು

Image Credits: Adobe Stock

ಒಂದು ಲೋಟ ಅಥವಾ ಪಾತ್ರೆಯಲ್ಲಿ  ಕಾಮಕಸ್ತೂರಿ ಬೀಜ, ಬಾದಾಮಿ ಹಾಲು, ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ತಯಾರಿಸುವ ವಿಧಾನ

Image Credits: Adobe Stock

ಕಾಮಕಸ್ತೂರಿ ಬೀಜ ಒಂದಕ್ಕೊಂದು ಅಂಟಿಕೊಂಡು ಇರಬಾರದು. ಹೀಗಾಗಿ ಅದನ್ನು ಚಮಚದಿಂದ ಸರಿಯಾಗಿ ಕಲಸಿ.

Image Credits: Adobe Stock

ಲೋಟ ಅಥವಾ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿ. ಚಿಯಾ ಬೀಜಗಳು ದ್ರವವನ್ನು ಹೀರಿಕೊಳ್ಳಲು ಮತ್ತು ದಪ್ಪವಾಗಲು ಕನಿಷ್ಠ 2 ಗಂಟೆಗಳ ಕಾಲ ಹಾಗೆಯೇ ಇಡಿ.

Image Credits: Adobe Stock

ಈ ಮಿಶ್ರಣ ದಪ್ಪವಾದ ನಂತರ, ಮುಚ್ಚಳವನ್ನು ತೆಗೆದು ಮತ್ತೆ ಚಮಚದಿಂದ ಚೆನ್ನಾಗಿ ಕಲಸಿಕೊಳ್ಳಿ.

Image Credits: Adobe Stock

ಮಿಶ್ರಣವು ತುಂಬಾ ದಪ್ಪವಾಗಿದ್ದರೆ, ನಿಮಗೆ ಬೇಕಾಗುವಷ್ಟು ಹಾಲನ್ನು ಬೆರೆಸಿ.

Image Credits: Adobe Stock

ಹಣ್ಣುಗಳು, ಒಣಹಣ್ಣುಗಳು, ಬೀಜಗಳನ್ನು ಈ ಮಿಶ್ರಣದ ಮೇಲೆ ಹಾಕಿ. ಹಣ್ಣುಗಳನ್ನು ಸಣ್ಣಗೆ ಕತ್ತರಿಸಿ ಬೆರೆಸಬಹುದು.

Image Credits: Adobe Stock

ರುಚಿಕರ ಹಾಗೂ ಆರೋಗ್ಯಕರ ಕಾಮಕಸ್ತೂರಿ ಬೀಜದ ಸ್ಮೂಥಿ ಸವಿಯಲು ಸಿದ್ಧ. 

Pinterest

ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರು, ರೋಹಿತ್​ 2ನೇ ಸ್ಥಾನಕ್ಕೆ ಜಿಗಿತ!