ಕಲ್ಲಂಗಡಿ ಹಣ್ಣಿನ ಐಸ್‍ಕ್ರೀಂ ಪಾಕವಿಧಾನ ಇಲ್ಲಿದೆ

Image Source From unsplash

By Priyanka Gowda
May 19, 2025

Hindustan Times
Kannada

ಮಧ್ಯಮ ಗಾತ್ರದ ಕಲ್ಲಂಗಡಿಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದುಹಾಕಿ. ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬೀಜಗಳಿದ್ದರೆ ಅದನ್ನು ತೆಗೆದುಹಾಕಬೇಕು.

Image Source From unsplash

ಕತ್ತರಿಸಿದ ಕಲ್ಲಂಗಡಿ ತುಂಡುಗಳನ್ನು ಬ್ಲೆಂಡರ್‌ನಲ್ಲಿ ಹಾಕಿ, ಮೃದುವಾಗಿ ಪೇಸ್ಟ್ ಮಾಡಿ.

Image Source From unsplash

ಮೃದುವಾದ ಐಸ್‍ಕ್ರೀಮ್ ಬಯಸಿದರೆ, ಕಲ್ಲಂಗಡಿ ತಿರುಳನ್ನು ತೆಳುವಾದ ಬಟ್ಟೆ ಅಥವಾ ಜರಡಿಯಿಂದ ಫಿಲ್ಟರ್ ಮಾಡಬೇಕು.

Image Source From unsplash

ರುಚಿಗೆ ಸಾಕಷ್ಟು ಸಕ್ಕರೆ ಅಥವಾ ಜೇನುತುಪ್ಪವನ್ನು ಬೆರೆಸಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಮಿಶ್ರಣ ಮಾಡಿ. ಸ್ವಲ್ಪ ನಿಂಬೆ ರಸವನ್ನು ಸಹ ಸೇರಿಸಬಹುದು.

Image Source From unsplash

ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಇದನ್ನು ಗಾಳಿಯಾಡದ ಲೋಟಕ್ಕೆ ಹಾಕಿ. ಇದನ್ನು ಕನಿಷ್ಠ 4 ರಿಂದ 6 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇರಿಸಿ. 

Image Source From unsplash

ಪ್ರತಿ ಗಂಟೆಗೊಮ್ಮೆ ಇದನ್ನು ಫ್ರೀಜರ್‌ನಿಂದ ಹೊರತೆಗೆದು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 2 ರಿಂದ 3 ಬಾರಿ ಮಾಡಿ. 

Image Source From unsplash

ಐಸ್‍ಕ್ರೀಮ್ ಗಟ್ಟಿಯಾದ ನಂತರ ಅದನ್ನು ಸ್ಕೂಪ್‍ನಿಂದ ತೆಗೆದು ತಿನ್ನಿರಿ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ.

Image Source From unsplash

ನೀವು ಬಯಸಿದರೆ ಪುದೀನಾ ಎಲೆ ಅಥವಾ ಕಲ್ಲಂಗಡಿಯ ಸಣ್ಣ ತುಂಡುಗಳಿಂದ ಐಸ್‍ಕ್ರೀಂ ಅನ್ನು ಅಲಂಕರಿಸಬಹುದು. 

Image Source From unsplash

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS