ಈಗ ನಿಮಗೆ ಶನಿ ಮಹಾದೆಸೆ ನಡೆಯುತ್ತಿದೆಯಾ?, ಹಾಗಿದ್ದರೆ ಇಲ್ಲಿದೆ ಸರಳ ಪರಿಹಾರೋಪಾಯ
By Umesh Kumar S
Nov 30, 2024
Hindustan Times
Kannada
ಪ್ರತಿಯೊಬ್ಬನಿಗೂ ಆತನ ಕಾರ್ಯಗಳಿಗೆ ಅನುಗುಣವಾಗಿ ಕರ್ಮಫಲ ನೀಡುವ ನ್ಯಾಯ ದೇವತೆ ಶನಿ ಎಂದು ಜನ ನಂಬುತ್ತಾರೆ.
ಶನಿ ಮಹಾದೆಸೆಯಲ್ಲಿರುವ ವ್ಯಕ್ತಿಯು ತನ್ನ ಕಾರ್ಯಗಳಿಗೆ ಅನುಗುಣವಾಗಿ ಶುಭ ಅಥವಾ ಅಶುಭ ಫಲಿತಾಂಶ ಪಡೆಯುತ್ತಾನೆ.
ನಿಮ್ಮ ಜಾತಕದಲ್ಲಿ ಶನಿಯ ಮಹಾದೆಸೆ ಇದ್ದರೆ, ನಿಮ್ಮ ಜೀವನದಲ್ಲಿ ಅನೇಕ ಸಂಕಷ್ಟ, ಹೋರಾಟ ಸನ್ನಿವೇಶಗಳು ಉಂಟಾಗಬಹುದು.
ಇಂತಹ ಸನ್ನಿವೇಶದಲ್ಲಿ ಶನಿ ಮಹಾದೆಸೆಯ ಪ್ರಭಾವ ಕಡಿಮೆ ಮಾಡಲು ಏನು ಮಾಡಬೇಕು ಎಂಬುದನ್ನು ನೋಡೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮಹಾದೆಸೆ ದುಷ್ಪರಿಣಾಮ ಕಡಿಮೆ ಮಾಡಲು ಜೀವನದಲ್ಲಿ ಶಿಸ್ತು ಪಾಲನೆ ಮುಖ್ಯ.
ಶನಿಯು ಕರ್ಮ ಮತ್ತು ಶಿಸ್ತಿನ ಗ್ರಹ, ಆದ್ದರಿಂದ ಪ್ರತಿ ಕೆಲಸದಲ್ಲಿ ಕ್ರಮಬದ್ಧತೆ ಮತ್ತು ಸಂಯಮ ಇರುವುದನ್ನು ಖಚಿತಪಡಿಸಬೇಕು.
ಶನಿ ಮಹಾದೆಸೆ ಪ್ರಭಾವವನ್ನು ಕಡಿಮೆ ಮಾಡಲು, ನಿಮ್ಮೊಳಗಿನ ಅಹಂಕಾರವನ್ನು ತ್ಯಜಿಸುವುದು ಬಹಳ ಮುಖ್ಯ.
ನಿಮ್ಮ ಜಾತಕದಲ್ಲಿ ಶನಿ ಮಹಾದಶಾ ಇದ್ದರೆ ‘ಓಂ ಶಂ ಶನೈಶ್ಚರಾಯ ನಮಃ’ ಎಂಬ ಮಂತ್ರವನ್ನು ಪ್ರತಿನಿತ್ಯ ಜಪಿಸಿದರೆ ಶುಭ ಫಲ ಹೆಚ್ಚು.
ಜೀವನದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ .ಶನಿ ಚಾಲೀಸಾವನ್ನು ಪ್ರತಿ ಶನಿವಾರ ಪಠಿಸುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ,
ಇದು ನಂಬಿಕೆ, ಶಾಸ್ತ್ರವನ್ನು ಆಧರಿಸಿದ ಬರಹ. ಇದರ ಯಾವ ಅಂಶವನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ.
ಸ್ವಂತ ವಿವೇಚನೆ ಬಳಸಿ ನಿರ್ಧಾರ ತೆಗೆದುಕೊಳ್ಳಿ.
ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ 7 ತರಕಾರಿಗಳು
Slurrp
ಮುಂದಿನ ಸ್ಟೋರಿ ಕ್ಲಿಕ್ ಮಾಡಿ