ಮಹಾರಾಷ್ಟ್ರ, ಅದರಲ್ಲೂ ಮುಂಬೈನಲ್ಲಿ ವಡಾ ಪಾವ್ ಬಹಳ ಫೇಮಸ್ ಆಗಿದೆ, ಇದು ಇತರ ರಾಜ್ಯಗಳಲ್ಲೂ ಜನಪ್ರಿಯವಾಗಿದೆ
ಟೇಸ್ಟ್ ಅಟ್ಲಾಸ್‌ನ ವಿಶ್ವದ 50 ಅತ್ಯುತ್ತಮ ಸ್ಯಾಂಡ್‌ವಿಚ್‌ಗಳಲ್ಲಿ ವಡಾಪಾವ್ ಕೂಡಾ ಸೇರಿದೆ, ಇದನ್ನು ಮನೆಯಲ್ಲೇ ತಯಾರಿಸಬಹುದು
ಇದಕ್ಕಾಗಿ ಕಡ್ಲೆಹಿಟ್ಟು, ಬೇಯಿಸಿದ ಆಲೂಗಡ್ಡೆ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಸಾಸಿವೆ, ಕರಿಬೇವು, ನಿಂಬೆ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಪಾವ್ ಬೇಕು
ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ಅದಕ್ಕೆ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ನಿಂಬೆ ರಸ, ಉಪ್ಪು ಅರಿಶಿನ ಸೇರಿಸಿ
ಎಣ್ಣೆ ಕಾಯಿಸಿ ಸಾಸಿವೆ, ಕರಿಬೇವು ಒಗ್ಗರಣೆ ಮಾಡಿ ಅದಕ್ಕೆ ಮ್ಯಾಶ್ ಮಾಡಿ ಮಸಾಲೆ ಮಿಕ್ಸ್ ಮಾಡಿದ ಆಲೂಗಡ್ಡೆ ಸೇರಿಸಿ
ಕಡ್ಲೆಹಿಟ್ಟಿಗೆ ಉಪ್ಪು, ಅರಿಶಿನ ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿಕೊಳ್ಳಿ. ಆಲೂಗಡ್ಡೆ ಮಿಶ್ರಣದಿಂದ ಉಂಡೆ ಮಾಡಿ, ಅದನ್ನು ಕಡ್ಲೆಹಿಟ್ಟಿನಲ್ಲಿ ಅದ್ದಿ ಕಂದು ಬಣ್ಣ ಬರುವರೆಗೂ ಕರಿಯಿರಿ
ಪಾವ್ ಮಧ್ಯದಲ್ಲಿ ಒಡೆ ಇಟ್ಟು ಮಧ್ಯದಲ್ಲಿ ಕತ್ತರಿಸಿ ಬೆಳ್ಳುಳ್ಳಿ ಚಟ್ನಿ ಅಥವಾ ಪುದೀನಾ ಚಟ್ನಿ ಜೊತೆ ಸವಿಯಿರಿ
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು