ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಹೆಚ್ಚು ಪ್ರಾಮುಖ್ಯತೆ ಇದೆ, ಇದು ಶಿವನಿಗೆ ಬಹಳ ಪ್ರಿಯವಾದದ್ದು, ಶಿವನ ಅಂಶವೆಂದೇ ಪರಿಗಣಿಸಲಾಗಿದೆ
ರುದ್ರಾಕ್ಷಿ ಧರಿಸಿದವರಿಗೆ ಶಿವನ ವಿಶೇಷ ಕೃಪೆ ಸಿಗಲಿದೆ ಎಂದು ನಂಬಲಾಗಿದೆ
ರುದ್ರಾಕ್ಷಿಯನ್ನು ಹೇಗೆ ಬೇಕಾದರೆ ಹಾಗೇ ಧರಿಸುವಂತಿಲ್ಲ, ಅದನ್ನು ಧರಿಸಲು ಕೆಲವೊಂದು ನಿಯಮಗಳಿವೆ
ರುದ್ರಾಕ್ಷಿ ಧರಿಸುವಾಗ ದಾರದ ಬಣ್ಣಕ್ಕೂ ಆದ್ಯತೆ ನೀಡಬೇಕು, ಇದನ್ನು ಕಪ್ಪು ಬಣ್ಣದಲ್ಲಿ ಕಟ್ಟಿ ಧರಿಸುವಂತಿಲ್ಲ
ಹಳದಿ ಅಥವಾ ಕೆಂಪು ದಾರದಲ್ಲಿ ಕಟ್ಟಿ ಧರಿಸಿದರೆ ಶುಭ
ಇದು ಬಹಳ ಪವಿತ್ರವಾದದ್ದು, ಸ್ನಾನ ಮಾಡಿ, ಶುಭ್ರ ಬಟ್ಟೆಗಳನ್ನು ಧರಿಸಿ ಮುಟ್ಟಬೇಕು
ರುದ್ರಾಕ್ಷಿಯನ್ನು ಧರಿಸುವಾಗ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಬೇಕು
ರುದ್ರಾಕ್ಷಿ ಧರಿಸಿ ಮಾಂಸಾಹಾರ , ಮಧ್ಯಪಾನ, ಧೂಮಪಾನ ಮಾಡುವಂತಿಲ್ಲ
ಮಲಗುವಾಗ ಕೂಡಾ ನೀವು ರುದ್ರಾಕ್ಷಿಯನ್ನು ತೆಗೆದು ಮಲಗಬೇಕು, ಮರುದಿನ ಮತ್ತೆ ಸ್ನಾನ ಮಾಡಿದ ನಂತರವೇ ಧರಿಸಬೇಕು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.